ನಾಯಿ ಕಚ್ಚಿ ಠಾಕ್ರೆ ಪತ್ನಿಗೆ 65 ಸ್ಟಿಚ್!

ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಪತ್ನಿ ಶರ್ಮಿಳಾ ಅವರು ಸಾಕು ನಾಯಿ ಕಚ್ಚಿದ ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ...
ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ  ಹಾಗೂ ಅವರ ಪತ್ನಿ ಶರ್ಮಿಳಾ (ಸಂಗ್ರಹ ಚಿತ್ರ)
ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಹಾಗೂ ಅವರ ಪತ್ನಿ ಶರ್ಮಿಳಾ (ಸಂಗ್ರಹ ಚಿತ್ರ)

ಮುಂಬೈ: ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಪತ್ನಿ ಶರ್ಮಿಳಾ ಅವರು ಸಾಕು ನಾಯಿ ಕಚ್ಚಿದ ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ.

ಶರ್ಮಿಳಾ ಅವರ ಮುಖಕ್ಕೆ 65 ಸ್ಟಿಚ್ ಹಾಕಲಾಗಿದೆ. ಠಾಕ್ರೆ ಮನೆಯಲ್ಲಿ ಗ್ರೇಟ್ ಡೇನ್ ಬ್ರೀಡ್‍ನ ಎರಡು ಜೇಮ್ಸ್ ಹಾಗೂ ಬಾಂಡ್ ಹೆಸರಿನ ನಾಯಿ ಸಾಕಲಾಗಿದೆ. ಇದರಲ್ಲಿ ಬಾಂಡ್ ಶರ್ಮಿಳಾ ಮೇಲೆ ದಾಳಿ ಎಸಗಿದೆ.

ಬಾಂಡ್ ಯಾಕಾಗಿ ಶರ್ಮಿಳಾ ಮೇಲೆ ದಾಳಿ ನಡೆಸಿತು ಎಂದು ಗೊತ್ತಾಗಿಲ್ಲ. ಆದರೆ, ನಾಯಿಯ ಹಲ್ಲು ಆಕೆಯ ಮೂಳೆಯವರೆಗೂ ಗಾಯ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ ಎಂದು ಹಿಂದುಜಾ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com