40 ನಿಮಿಷಗಳ ಕಾಲ ಲಿಫ್ಟ್ ನಲ್ಲಿ ಸಿಲುಕಿ ಒದ್ದಾಡಿದ ಅಮಿತ್ ಶಾ

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಾಟ್ನಗೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಇಲ್ಲಿನ ರಾಜಭವನ ಅತಿಥಿ ಗೃಹದ ಲಿಫ್ಟ್ ನಲ್ಲಿ ಸಿಕ್ಕಿಹೊಕಿಕೊಂಡು ಸುಮಾರು 40ನಿಮಿಷಗಳಿಗೂ ಹೆಚ್ಚು ಕಾಲ ಲಿಫ್ಟ್ ನಲ್ಲಿ ಒದ್ದಾಡಿದ ಘಟನೆ ಶುಕ್ರವಾರ ನಡೆದಿದೆ...
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ (ಸಂಗ್ರಹ ಚಿತ್ರ)
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ (ಸಂಗ್ರಹ ಚಿತ್ರ)

ಪಾಟ್ನ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಾಟ್ನಗೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಇಲ್ಲಿನ ರಾಜಭವನ ಅತಿಥಿ ಗೃಹದ ಲಿಫ್ಟ್ ನಲ್ಲಿ ಸಿಕ್ಕಿಹೊಕಿಕೊಂಡು ಸುಮಾರು 40ನಿಮಿಷಗಳಿಗೂ ಹೆಚ್ಚು ಕಾಲ ಲಿಫ್ಟ್ ನಲ್ಲಿ ಒದ್ದಾಡಿದ ಘಟನೆ ಶುಕ್ರವಾರ ನಡೆದಿದೆ.

ವಿಧಾನಸಭಾ ಚುನಾವಣೆ ಸಮಾಪಿಸುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಪಾಟ್ನಾಗೆ ಅಮಿತ್ ಶಾ ಭೇಟಿ ನೀಡಿದ್ದರು. ಪಾಟ್ನದ ರಾಜಭವನ ಬಳಿ ಇರುವ ಸರ್ಕಾರಿ ಅತಿಥಿ ಗೃಹದಲ್ಲಿ ನೆಲೆಸಿದ್ದರು. ಮೊದಲ ಮಹಡಿಯಿಂದ ಕೆಳ ಮಹಡಿಗೆ ತೆರಳಲು ಲಿಫ್ಟ್ ಬಳಸಿದ್ದರು. ಅಮಿತ್ ಶಾ ಜೊತೆ ಭುಪೇಂದರ್ ಯಾದವ್, ನರೇಂದ್ರ ಜೀ ಹಾಗೂ ಸೌದನ್ ಸಿಂಗ್ ಸಹ ಇದ್ದರು. ಲಿಫ್ಟ್ ಬಾಗಿಲು ಮುಚ್ಚಿ ಕೆಳ ಮಹಡಿಗೆ ಹೋಗುವ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಜಾಮ್ ಆದ ಪರಿಣಾಮ ಅಮಿತ್ ಶಾ ಹಾಗೂ ಜೊತೆಗಿದ್ದವರೆಲ್ಲರೂ ಲಿಫ್ಟ್ ನಲ್ಲಿ ಸಿಲುಕಿದ್ದಾರೆ.

ದುರಾದೃಷ್ಟಕರ ಸಂಗತಿಯೆಂದರೆ ಅತಿಥಿ ಗೃಹದಲ್ಲಿ ಲಿಫ್ಟ್ ಜಾಮ್ ಆದರೆ ಅದನ್ನು ಸರಿಪಡಿಸಲು ರಕ್ಷಣೆ ಮಾಡಲು ಸ್ಥಳದಲ್ಲಿ ಯಾರು ಇಲ್ಲ. ರಕ್ಷಣಾ ಸಿಬ್ಬಂದಿ ಇಲ್ಲದ ಕಾರಣ ಸುಮಾರು 40 ನಿಮಿಷಕ್ಕೂ ಹೆಚ್ಚು ಕಾಲ ಅಮಿತ್ ಶಾ ಅವರು ಲಿಫ್ಟ್ ನಲ್ಲೇ ಕಾಲ ಕಳೆದಿದ್ದಾರೆ. ನಂತರ ಅಮಿತ್ ಶಾಗೆ ನೀಡಿದ್ದ ಝಡ್ ಪ್ಲಸ್ ಭದ್ರತಾ ಪಡೆ ರಕ್ಷಣೆಗೆ ಮುಂದಾಗಿದೆ. ಆದರೆ, ಲಿಫ್ಟ್ ಬಾಗಿಲನ್ನು ತೆರೆಯುವುದಕ್ಕೆ ಸಾಧ್ಯವಾಗದಿದ್ದಾರೆ. ಬಾಗಿಲನ್ನು ಕತ್ತರಿಸಿ ಅಮಿತ್ ಶಾ ಅವರನ್ನು ರಕ್ಷಿಸಿದ್ದಾರೆ.

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಹಾರ ಬಿಜೆಪಿ ಅಧ್ಯಕ್ಷ ಮಂಗಲ್ ಪಾಂಡೆ ಅವರು ನಿನ್ನೆ ರಾತ್ರಿ ಸುಮಾರು 11.30ರ ಸುಮಾರಿಗೆ ಮೊದಲ ಮಹಡಿಯಿಂದ ನೆಲ ಮಹಡಿಗೆ ಹೋಗುವಾಗ ಇದ್ದಕ್ಕಿದ್ದಂತೆ ಲಿಫ್ಟ್ ಜಾಮ್ ಆಯಿತು. ಈ ವೇಳೆ ತುರ್ತು ಪರಿಸ್ಥಿತಿ ನಿಭಾಯಿಸಲು ಲಿಫ್ಟ್ ನಿರ್ವಾಹಕರಾರು ಸ್ಥಳದಲ್ಲಿರಲಿಲ್ಲ. ಕರೆ ಮಾಡೋಣ ಎಂದರೆ ಮೊಬೈಲ್ ಫೋನ್ ನಲ್ಲಿ ನೆಟ್ ವರ್ಕ್ ಸಹ ಇರಲಿಲ್ಲ. ಸಮಯಕ್ಕೆ ಸರಿಯಾಗಿ ಸ್ಥಳದಲ್ಲಿ ಸಿಆರ್ ಪಿಎಫ್ ಸಿಬ್ಬಂದಿಗಳು ಸ್ಥಳದಲ್ಲಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಬಂದು ಲಿಫ್ಟ್ ಬಾಗಿಲನ್ನು ಎಳೆಯಲು ಪ್ರಯತ್ನ ಮಾಡಿದರಾದರೂ ಬಾಗಿಲು ತೆಗೆಯಲು ಸಾಧ್ಯವೇ ಆಗಲಿಲ್ಲ. 40 ನಿಮಿಷ ಕಳೆದರೂ ಯಾವುದೇ ಬಾಗಿಲು ತೆಗೆಯುವಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ. ನಂತರ ಬಾಗಿಲು ಒಡೆಯುವಂತೆ ಸೂಚನೆ ನೀಡಲಾಯಿತು ನಂತರ ಬಾಗಿಲನ್ನು ಕತ್ತರಿಸಿ ಅಮಿತ್ ಶಾರನ್ನು ರಕ್ಷಿಸಿದರು ಎಂದು ಹೇಳಿದ್ದಾರೆ.

ಲಿಫ್ಟ್ ನಿಂದ ಹೊರಬಂದ ನಾಯಕರು ಸುಧಾರಿಸಿಕೊಳ್ಳಲು ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ತೆಗೆದುಕೊಂಡರು. ಘಟನೆಯಿಂದ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯ ಎದ್ದುಕಾಣುತ್ತಿದ್ದು, ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com