• Tag results for patna

ಪಾಟ್ನಾದಲ್ಲಿ ಮರಳು ಗಣಿಗಾರಿಕೆ ವಿಚಾರವಾಗಿ ಎರಡು ಗುಂಪುಗಳ ಘರ್ಷಣೆ: ನಾಲ್ವರ ಸಾವು

ಪಾಟ್ನಾದ ಬಿಹ್ತಾ ಪ್ರದೇಶದಲ್ಲಿ ಕಳೆದ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

published on : 30th September 2022

ದಶಪಥ ಹೆದ್ದಾರಿ: ಚನ್ನಪಟ್ಟಣದ ವಿಶ್ವವಿಖ್ಯಾತ ‘ಆಟಿಕೆಗಳ ನಾಡು' ಖ್ಯಾತಿ ಅಂತ್ಯ!

ನೂರಾರು ವರ್ಷಗಳ ಹಿಂದಿನ ಶ್ರೀಮಂತ ಸಾಂಸ್ಕೃತಿಕ ಇತಿಹಾಸ ಹೊಂದಿರುವ ಆಟಿಕೆಗಳ ನಾಡು ಚನ್ನಪಟ್ಟಣವು ಮರದ ಕರಕುಶಲ ಮತ್ತು ನುರಿತ ಕುಶಲಕರ್ಮಿಗಳಿಗೆ ಹೆಸರುವಾಸಿಯಾಗಿದೆ.

published on : 18th September 2022

ಬಿಹಾರ: ಮುಸ್ಲಿಂ ಸಚಿವರ ಭೇಟಿ, ದೇವಾಲಯ ಶುದ್ಧೀಕರಿಸಿದ ಬಿಜೆಪಿ!

 ಬಿಹಾರದ ನೂತನ ಸರ್ಕಾರದ ಹಿಂದೂಯೇತರ ಸಚಿವರೊಬ್ಬರು ಗರ್ಭಗುಡಿ ಪ್ರವೇಶ ವಿವಾದದ ನಡುವೆ ಬಿಜೆಪಿ ಗಯಾ ಜಿಲ್ಲಾ ಘಟಕವು ಇಲ್ಲಿನ ವಿಷ್ಣುಪಾದ್ ದೇವಸ್ಥಾನದ ಶುದ್ಧೀಕರಣ ಕಾರ್ಯ ನಡೆಸಿದೆ. 

published on : 26th August 2022

ಚನ್ನಪಟ್ಟಣ: ಚಿಕಿತ್ಸೆಗೆ ಬಂದು ಚಿನ್ನದ ಸರ ಕಳೆದುಕೊಂಡಿದ್ದ ವೃದ್ಧೆ;  ಪೊಲೀಸರಿಗೆ ಸರ ನೀಡಿ ಪ್ರಾಮಾಣಿಕತೆ ಮರೆದ ಯುವಕ!

ವೃದ್ದೆಯೊಬ್ಬರು ಕಳೆದುಕೊಂಡಿದ್ದ ಚಿನ್ನದ ಸರ ಹಿಂದಿರುಗಿಸಿದ ರಾಮನಗರ ‌ಜಿಲ್ಲೆಯ ಚನ್ನಪಟ್ಟಣದ ಯುವಕನಿಗೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್‌ ಬಾಬು ಅವರು ಪ್ರಶಂಸನಾ ಪತ್ರ ನೀಡಿ, ಯುವಕನನ್ನು ಉತ್ತೇಜಿಸಿದ್ದಾರೆ.

published on : 26th August 2022

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬೆಂಗಾವಲು ವಾಹನದ ಮೇಲೆ ದಾಳಿ, ಕಲ್ಲು ತೂರಾಟ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬೆಂಗಾವಲು ವಾಹನದ ಮೇಲೆ  ಭಾನುವಾರ ಕಲ್ಲು ತೂರಾಟ ನಡೆದಿದೆ. ಪಾಟ್ನಾದಲ್ಲಿ ನಡೆದ ಈ  ಘಟನೆ ವೇಳೆ ಬೆಂಗಾವಲು ವಾಹನ ಪಡೆಯಲ್ಲಿ ನಿತೀಶ್ ಕುಮಾರ್ ಇರಲಿಲ್ಲ ಎಂದು ತಿಳಿದುಬಂದಿದೆ.

published on : 21st August 2022

ರಜೆ ಮೇಲೆ ಊರಿಗೆ ಬಂದಿದ್ದ ಯೋಧನನ್ನು ಬೈಕ್‌ನಲ್ಲಿ ಬಂದು ಗುಂಡಿಟ್ಟು ಕೊಂದ ಇಬ್ಬರು!

ಇಂದು ಬೆಳಗ್ಗೆ ಪಾಟ್ನಾದ ಜನನಿಬಿಡ ಪ್ರದೇಶದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ರಜೆ ಮೇಲೆ ಊರಿಗೆ ಬಂದಿದ್ದ ಯೋಧನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

published on : 18th August 2022

ಶ್ರೀರಂಗಪಟ್ಟಣ: ಯೋಜನೆ ಘೋಷಣೆಯಾಗಿ 4 ವರ್ಷಗಳ ಬಳಿಕವೂ ಮರೀಚಿಕೆಯಾದ ಕೋಟೆ ದೋಣಿ ವಿಹಾರ

ಮಂಡ್ಯ ಜಿಲ್ಲೆಯ ಪ್ರಸಿದ್ಧ ಶ್ರೀರಂಗಪಟ್ಟಣ ಕೋಟೆಯಲ್ಲಿ ದೋಣಿ ವಿಹಾರ ಮರೀಚಿಕೆಯಾಗಿದ್ದು, ದೋಣಿ ವಿಹಾರಕ್ಕೆ ಪ್ರವಾಸಿಗರು ಇನ್ನೂ ಕಾಯುವಂತಾಗಿದೆ.

published on : 17th August 2022

ಬಿಹಾರ: ದಾಖಲೆಯ 8ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್, ಡಿಸಿಎಂ ಆಗಿ ತೇಜಸ್ವಿ ಪ್ರಮಾಣ!

ಬಿಜೆಪಿ ಸಖ್ಯ ಕಡಿದುಕೊಂಡು ಮೈತ್ರಿಸರ್ಕಾರದಿಂದ ಹೊರ ಬಂದ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಆರ್ ಜೆಡಿ ಮೈತ್ರಿಯೊಂದಿಗೆ ದಾಖಲೆಯ 8ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

published on : 10th August 2022

ಬಿಹಾರ: ಮಹಾಘಟಬಂಧನ್ ಸರ್ಕಾರ, ಬುಧವಾರ ನಿತೀಶ್ ಕುಮಾರ್, ತೇಜಸ್ವಿ ಯಾದವ್ ಪ್ರಮಾಣ ವಚನ ಸ್ವೀಕಾರ

ಬಿಹಾರದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿಯನ್ನು ಮುರಿದುಕೊಂಡಿರುವ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಆರ್ ಜೆಡಿ, ಕಾಂಗ್ರೆಸ್, ಎಡಪಕ್ಷಗಳ ಬೆಂಬಲದೊಂದಿಗೆ ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರೊಂದಿಗೆ ಆರ್ ಜೆಡಿ ಪಕ್ಷದ ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

published on : 9th August 2022

ಬಿಹಾರದಲ್ಲಿ ಮಹಾ ವಿಕಾಸ್ ಆಘಾಡಿ ಮಾದರಿ ಸರ್ಕಾರ? ಆರ್ ಜೆಡಿ, ಕಾಂಗ್ರೆಸ್, ಎಡಪಕ್ಷಗಳ ಬೆಂಬಲ; ನಿತೀಶ್ ಬಿಜೆಪಿ ಸಖ್ಯ ತೊರೆಯುವ ಸಾಧ್ಯತೆ

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಬಿಹಾರದಲ್ಲಿ ಎಲ್ಲಾ ಎನ್‌ಡಿಎಯೇತರ ಪಕ್ಷಗಳನ್ನು ಒಳಗೊಂಡಿರುವ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮಾದರಿಯ ಸಮ್ಮಿಶ್ರ ಸರ್ಕಾರ ರಚನೆಗೆ ಬೇಕಾದ ಎಲ್ಲಾ ರೀತಿಯ ಸಿದ್ಧತೆ ಮಾಡಲಾಗುತ್ತಿದೆ. 

published on : 9th August 2022

ಬಿಹಾರ: ಬಿಜೆಪಿ ಸಖ್ಯ ತೊರೆದು ನಿತೀಶ್ ಕುಮಾರ್ ಆರ್‌ಜೆಡಿಯೊಂದಿಗೆ ಮೈತ್ರಿ? ಮಂಗಳವಾರ ನಿರ್ಧಾರ ಪ್ರಕಟ

ಬಿಹಾರದಲ್ಲಿ ಜೆಡಿಯು ಬಿಜೆಪಿ ಜೊತೆಗಿನ ಸಖ್ಯ ತೊರೆಯುವ  ಕುರಿತು ಚರ್ಚೆಗಳು ಹೆಚ್ಚುತ್ತಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್  ಮಂಗಳವಾರ ಜೆಡಿಯು ಸಂಸದರು, ಶಾಸಕರು ಮತ್ತು ಎಂಎಲ್‌ಸಿಗಳೊಂದಿಗೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.  

published on : 8th August 2022

ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದು ಪ್ರಯಾಣಿಕನಿಂದ ಬೆದರಿಕೆ: ದೆಹಲಿಗೆ ಹೋಗುತ್ತಿದ್ದ ಇಂಡಿಗೊ ವಿಮಾನ ಪಾಟ್ನಾದಲ್ಲಿ ತುರ್ತು ಭೂಸ್ಪರ್ಶ

ತನ್ನ ಬ್ಯಾಗ್‌ನಲ್ಲಿ ಬಾಂಬ್‌ ಇದೆ ಎಂದು ಪ್ರಯಾಣಿಕರೊಬ್ಬರು ಹೇಳಿಕೊಂಡ ಹಿನ್ನೆಲೆಯಲ್ಲಿ ನಿನ್ನೆ ಅಂದರೆ ಗುರುವಾರ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ (ಸಂಖ್ಯೆ 6ಇ 2126) ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಘಟನೆ ನಡೆದಿದೆ. 

published on : 22nd July 2022

ವಾಟ್ಸಾಪ್ ನಲ್ಲಿ ನೂಪುರ್ ಶರ್ಮಾ ಬೆಂಬಲಿಸಿ ಸ್ಟೇಟಸ್ ಹಾಕಿಕೊಂಡಿದ್ದಕ್ಕೆ ಚಾಕು ಇರಿತ: ಯುವಕ ಆರೋಪ

ಬಿಜೆಪಿಯಿಂದ ಅಮಾನತುಗೊಂಡಿರುವ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ವಿಡಿಯೋವೊಂದನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಶೇರ್ ಮಾಡಿದ್ದಕ್ಕೆ ತನಗೆ ಚಾಕುವಿನಿಂದ ಇರಿಯಲಾಗಿದೆ ಎಂದು ಬಿಹಾರದ ಸೀತಾಮರ್ಹಿಯ ಯುವಕನೊಬ್ಬ ಆರೋಪಿಸಿದ್ದಾನೆ.

published on : 19th July 2022

ಅಗ್ನಿಪಥ್ ಯೋಜನೆ: ಜಾತಿ ಪ್ರಮಾಣ ಪತ್ರ ಅಗತ್ಯ ಕುರಿತು ಕೇಂದ್ರದ ವಿರುದ್ಧ ತೇಜಸ್ವಿ ವಾಗ್ದಾಳಿ; ರಾಜನಾಥ್ ಸಿಂಗ್ ತಿರುಗೇಟು

ರಕ್ಷಣಾ ಪಡೆಗಳಲ್ಲಿ ಅಗ್ನಿವೀರ್‌ಗಳ ನೇಮಕಾತಿಯಲ್ಲಿ ಜಾತಿ ಪ್ರಮಾಣ ಪತ್ರ ಕೇಳಿರುವುದಕ್ಕಾಗಿ ನರೇಂದ್ರ ಮೋದಿ ಸರ್ಕಾರವನ್ನು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ತರಾಟೆಗೆ ತೆಗೆದುಕೊಂಡಿದ್ದಾರೆ.

published on : 19th July 2022

ಮೈಸೂರಿನಲ್ಲಿ ಮಳೆಯಿಂದ ತೊಂದರೆಗೊಳಗಾದ ಕುಟುಂಬಗಳಿಗೆ 'ಅಂಬಿಗ'ನ ನೆರವು!

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಕಾವೇರಿ ನದಿ ಪ್ರವಾಹದಿಂದಾಗಿ ಶ್ರೀರಂಗಪಟ್ಟಣದ ಖಾಸಗಿ ಲೇಔಟ್‌ನ 25 ಕುಟುಂಬಗಳು ಪಟ್ಟಣದ ಉಳಿದ ಭಾಗಗಳಿಂದ ಸಂಪರ್ಕ ಕಳೆದುಕೊಂಡಿದ್ದು, ಈ ಕುಟುಂಬಗಳಿಗೆ ಚಿಕನ್ ಮಾರಾಟಗಾರ ಅಂಬಿಗನಾಗಿ ನೆರವು ನೀಡುತ್ತಿದ್ದಾರೆ.

published on : 17th July 2022
1 2 3 > 

ರಾಶಿ ಭವಿಷ್ಯ