
ಇಂದೋರ್: 2014ರಲ್ಲಿ ಅಪಘಾತ ಹಾಗೂ ಆತ್ಮಹತ್ಯೆಯಂತಹ ಪ್ರಕರಣಗಳಲ್ಲಿ ಅವಿವಾಹಿತರಿಗಿಂತ ಮೂರು ಪಟ್ಟು ವಿವಾಹಿತರು ಸಾವನ್ನಪ್ಪಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲು ಸಂಸ್ಥೆ(ಎನ್ಸಿಆರ್ಬಿ) ಬಿಡುಗಡೆ ಮಾಡಿರುವ ವರದಿಯ ಪ್ರಕಾರ, 2014ರಲ್ಲಿ ಭಾರತದಲ್ಲಿ ಅಪಘಾತ ಮತ್ತು ಆತ್ಮಹತ್ಯೆ ಪ್ರಕಣಗಳಲ್ಲಿ ಒಟ್ಟಾರೆ 1,31,666 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಶೇ.65.9ರಷ್ಟು ವಿವಾಹಿತರು ಹಾಗೂ ಶೇ.21.1ರಷ್ಟು ಅವಿವಾಹಿತರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಆತ್ಮಹತ್ಯೆ ಮಾಡಿಕೊಂಡವರ ಪೈಕಿ ಶೇ.1.4ರಷ್ಟು ವಿಚ್ಛೇದಿತರು ಹಾಗೂ 2.1ರಷ್ಟು ವಿದವೆ, ವಿದುರರಿದ್ದಾರೆ ಎಂದು ಎನ್ಸಿಆರ್ಬಿಟಿ ವರದಿ ತಿಳಿಸಿದೆ.
'ಈ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ, ಕೌಟುಂಬಿಕ ಸಂಬಂಧಗಳಲ್ಲಿ ಸಾಕಷ್ಟು ಬದಲಾವಣೆಯ ಅಗತ್ಯ ಇದೆ' ಎಂದು ಮನೋವಿಜ್ಞಾನಿ ಹಾಗೂ ಸಮಾಲೋಚಕ ಡಾ.ಅಭಯ್ ಜೈನ್ ಅವರು ಹೇಳಿದ್ದಾರೆ.
'ಇತ್ತೀಚಿಗೆ ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರತ್ಯೇಕವಾಗಿ ವಾಸ ಮಾಡುವ ದಂಪತಿಗಳ ಮಧ್ಯೆ ಸಂವನ ಕೊರತೆ ಇರುತ್ತದೆ. ವೈಯಕ್ತಿಕ ಮತ್ತು ವೃತ್ತಿಪರ ಸಮಸ್ಯೆಗಳನ್ನು ಹಂಚಿಕೊಳ್ಳುವುದಿಲ್ಲ. ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಲು ಏಕಾಂಗಿ ಹೋರಾಟ ನಡೆಸುತ್ತಾರೆ. ವಿಫಲವಾದಾಗಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ ಮತ್ತು ಅಂತಿಮವಾಗಿ ಸಾಯುವ ನಿರ್ಧಾರ ತೆಗೆದುಕೊಳ್ಳುತ್ತಾರೆ' ಎಂದು ಜೈನ್ ಹೇಳಿದ್ದಾರೆ.
Advertisement