
ನವದೆಹಲಿ: ಆಮ್ ಆದ್ಮಿ ಪಕ್ಷದ ಶಾಸಕ ಸುರಿಂದರ್ ಸಿಂಗ್ ಬಂಧನ ಪ್ರಕರಣ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಆಪ್ ಶಾಸಕ ಸುರಿಂದರ್ ಸಿಂಗ್ ಅವರ ಬಂಧನದ ಹಿಂದೆ ಮೋದಿ ಕೈವಾಡವಿದೆ ಎಂದು ಆರೋಪಿಸಿದರು. ಸುರಿಂದರ್ ಸಿಂಗ್ ಬಂಧನವಾಯ್ತು. ಅವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಆದರೆ ಪ್ರಧಾನಿ ಮೋದಿಗೆ ಏನು ಸಿಕ್ತು. ಇದರಿಂದ ಅವರಿ ಸಾಧಿಸಿದ್ದಾದರೂ ಏನು? ಸುರೀಂದರ್ ಸಿಂಗ್ ಬಂಧನದ ಹಿಂದಿನ ಉದ್ದೇಶವೇನು ಎಂದು ಟ್ವೀಟರ್ ನಲ್ಲಿ ಪ್ರಶ್ನಿಸಿದ್ದಾರೆ.
ದೆಹಲಿಯ ಕಂಟೋನ್ಮೆಂಟ್ ಕ್ಷೇತ್ರ ಆಪ್ ಶಾಸಕ ಸುರಿಂದರ್ ಸಿಂಗ್ ಆಗಸ್ಟ್ 4 ರಂದು ದೆಹಲಿ ಮಹಾನಗರ ಪಾಲಿಕೆಯ ನೌಕರನ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಈ ಹಿನ್ನಲೆಯಲ್ಲಿ ಸುರೀಂದರ್ ಸಿಂಗ್ ಅವರನ್ನು ಬಂಧಿಸಲಾಗಿತ್ತು. 24 ಗಂಟೆಗಳೊಳಗೆ ಸಿಂಗ್ ಜಾಮೀನಿನ ಮೇಲೆ ಹೊರ ಬಂದಿದ್ದರು.
ನಕಲಿ ಪದವಿ ಪ್ರಮಾಣ ಪತ್ರದ ಆರೋಪದ ಮೇಲೆ ದೆಹಲಿಯ ಮಾಜಿ ಕಾನೂನು ಸಚಿವ ಜೀತೇಂದ್ರ ಸಿಂಗ್ ತೋಮಾರ್ ಅವರನ್ನು ಬಂಧಿಸಲಾಗಿತ್ತು. ಅದಾದ ನಂತರ ಭೂ ವಂಚನೆ ಪ್ರಕರಣದಲ್ಲಿ ಶಾಸಕ ಮನೋಜ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.
Advertisement