ಆಷ್ಲೆ ಮ್ಯಾಡಿಸನ್ ಪಟ್ಟಿಯಲ್ಲಿ ಲಕ್ಷಕ್ಕೂ ಹೆಚ್ಚು ಭಾರತಿಯರು

ಆಷ್ಲೆ ಮ್ಯಾಡಿಸನ್ ವೆಬ್‍ಸೈಟ್‍ನಿಂದ ಸೋರಿಕೆಯಾಗಿರುವ ಮಾಹಿತಿ ಭಾರತದಲ್ಲೂ ಬಿರುಗಾಳಿ ಎಬ್ಬಿಸಲಿದೆಯಾ...
ಆಷ್ಲೆ ಮ್ಯಾಡಿಸನ್ ವೆಬ್ ಸೈಟ್
ಆಷ್ಲೆ ಮ್ಯಾಡಿಸನ್ ವೆಬ್ ಸೈಟ್

ಲಂಡನ್: ಆಷ್ಲೆ ಮ್ಯಾಡಿಸನ್ ವೆಬ್‍ಸೈಟ್‍ನಿಂದ ಸೋರಿಕೆಯಾಗಿರುವ ಮಾಹಿತಿ ಭಾರತದಲ್ಲೂ ಬಿರುಗಾಳಿ ಎಬ್ಬಿಸಲಿದೆಯಾ? ಜೀವನ ಚಿಕ್ಕದು.

ಒಂದಾದ್ರೂ ಅಫೇರ್ ಇಟ್ಕೊಳ್ಳಿ ಎಂಬ ಟ್ಯಾಗ್‍ಲೈನ್ ನಿಂದಲೇ ಖ್ಯಾತವಾಗಿರುವ ಈ ವಿವಾಹೇತರ ಸಂಬಂಧ ಬೆಸೆಯುವ ವೆಬ್‍ಸೈಟ್ ಹ್ಯಾಕ್ ಆಗಿ, ಅದರಲ್ಲಿರುವ ಮಾಹಿತಿ ಎಲ್ಲವೂ ಹೊರಬಿದ್ದಿರುವುದರಿಂದ ಜಗತ್ತಿನಾದ್ಯಂತ 3.7 ಕೋಟಿ ಗೂ ಹೆಚ್ಚು ಹೆಸರುಗಳು ಹೊರ ಬಂದಿವೆ.

ಲಂಡನ್‍ನಲ್ಲಿ ಮಹಿಳೆಯರು ಡಿವೋರ್ಸ್ ನೀಡುವ ಯೋಚನೆಗೆ ಬಿದ್ದಿದ್ದಾರೆ. ಭಾರತದ ವರ ಹೆಸರುಗಳು ಈ ಕಳಂಕಿತ ಪಟ್ಟಿಯಲ್ಲಿರಲಿಕ್ಕಿಲ್ಲ ಎಂದು ನಿಶ್ಚಿಂತೆಯಲ್ಲಿದ್ದವರಿಗೆ ಬರಸಿಡಿಲು ಬಡಿದಂತಾಗಿದೆ. ಈ ಸೈಟ್‍ನಲ್ಲಿ ಲಕ್ಷದಷ್ಟು ಹೆಸರುಗಳು ಭಾರತೀಯರದ್ದೇ.

ದೆಹಲಿಯ 38,652, ಮುಂಬೈಯ 33,036, ಚೆನ್ನೈನ 16,434, ಕೊಲ್ಕತಾದ 11,807 ಮಂದಿ ಈ ವಿವಾದಿತ ವೆಬ್‍ಸೈಟ್‍ನ ಸದಸ್ಯರೆಂದು ಅಂಕಿಅಂಶಗಳಿಂದ ತಿಳಿದುಬಂದಿದೆ. ಬೆಂಗಳೂರು ಕೂಡ ಈ ಪಟ್ಟಿಯಿಂದ ಹೊರತಾಗಿಲ್ಲ. 11,561 ಮಂದಿ ಬೆಂಗಳೂರಿನವರೇ ಆಗಿದ್ದಾರೆ.

ಎಲ್ಲಕ್ಕಿಂತ ಅಚ್ಚರಿಯೆಂದರೆ, ಗಂಡಸರೇ ತುಂಬಿರುವ ಈ ಸೈಟ್‍ನಲ್ಲಿ ಭಾರತೀಯ ಮಹಿಳೆಯರೂ ಚಂದಾದಾರರಾಗಿರುವುದು ಕಂಡುಬಂದಿದೆ. ಇದರಲ್ಲಿ ಹೆಸರು ಇಮೇಲ್ ವಿಳಾಸ, ಕ್ರೆಡಿಟ್ ಕಾರ್ಡ್ ವಿವರಗಳೂ ಇದೆ.

ಮಾಲೀಕ ಮಾತ್ರ ಸಾಚಾ
ಆಶ್ಚರ್ಯದ ಸಂಗತಿ ಅನಿಸಬಹುದು. ಆಷ್ಲೆ ಮ್ಯಾಡಿಸನ್‍ನ ಸಿಇಒ ನೋಯೆಲ್ ಬಿಡರ್‍ಮನ್ ಒಬ್ಬ ವಿವಾಹಿತ. ಆದರೆ ಆತನಿಗೆ ಯಾವುದೇ ವಿವಾಹೇತರ ಸಂಬಂಧಗಳಿಲ್ಲ. ಈ ವೆಬ್ ಸೈಟ್‍ನಲ್ಲಿ ಅವನು ಖಾತೆಯನ್ನೂ ಹೊಂದಿಲ್ಲ.

ತಾನೊಬ್ಬ ನಂಬಿಕಸ್ಥ ಪತಿ ಎಂದು ಹೇಳಿಕೊಳ್ಳುತ್ತಾನೆ. 12 ವರ್ಷ ಪತ್ನಿ ಅಮಂಡಾಳೊಂದಿಗೆ ವೈವಾಹಿಕ ಜೀವನ ನಡೆಸಿರುವ ಈತನಿಗೆ ಇಬ್ಬರು ಮಕ್ಕಳಿದ್ದು ಸುಖೀ ಸಂಸಾರ ನಡೆಸುತ್ತಿರುವುದಾಗಿ ಹೇಳಿಕೊಳ್ಳುತ್ತಾನೆ. ಆದರೆ ತಾನು ಈ ವೆಬ್‍ಸೈಟ್ ನಡೆಸುತ್ತಿರುವುದು ತಪ್ಪೇನಲ್ಲ. ಇದೂ ಒಂದು ಉದ್ಯಮವಷ್ಟೆ. ವಿವಾಹೇತರ ಸಂಬಂಧಬಯಸುವವರಿಗಾಗಿ ವೆಬ್‍ಸೈಟ್ ಮಾಡಿದ್ದೇನೆ.

ಕೋಟಿಗಟ್ಟಲೆ ದುಡಿಯುತ್ತಿದ್ದೇನೆ. ಕಳೆದವರ್ಷದಲ್ಲಿ ರು.736 ಕೋಟಿ ಗಳಿಸಿದ್ದೇನೆ ಎನ್ನುವ ಈತ, ತಾನು ನ್ಯಾಯಬದ್ಧವಾಗಿಯೇ ಈ ಉದ್ಯಮ ನಡೆಸುತ್ತಿದ್ದು, ಹ್ಯಾಕರ್‍ಗಳನ್ನು ಕೋರ್ಟ್‍ಗೆ ಎಳೆಯಬೇಕು ಎನ್ನುತ್ತಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com