
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಗೆ ಸೇರಿದ ವಿಮಾನವೊಂದು ಪತನವಾಗಿದೆ ಎಂದು ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಬದಗಾಮ್ ಜಿಲ್ಲೆಯಲ್ಲಿ ಮಿಗ್-21 ಬೈಸನ್ ವಿಮಾನ ಪತನವಾಗಿದ್ದು, ವಿಮಾನದಲ್ಲಿದ್ದ ಪೈಲಟ್ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ನಿತ್ಯದ ತರಬೇತಿ ನಿಮಿತ್ತ ವಿಮಾನವು ಶ್ರೀನಗರದಿಂದ ವಾಯು ಸೇನೆಗೆ ಸೇರಿದ ಏರ್ ಫೀಲ್ಡ್ ನತ್ತ ಪ್ರಯಾಣ ಬೆಳೆಸಿತ್ತು. ಮಾರ್ಗ ಮಧ್ಯೆ ವಿಮಾನವು ಬದಗಾಮ್ ಜಿಲ್ಲೆಯ ಸಾಯ್ ಬಾಗ್ ಬಳಿ ತಾಂತ್ರಿಕ ದೋಷಕ್ಕೆ ತುತ್ತಾಗಿ ಪೈಲಟ್ ನ ನಿಯಂತ್ರಣ ತಪ್ಪಿದೆ.
ಅದೃಷ್ಟವಶಾತ್ ವಿಮಾನದಲ್ಲಿ ಪೈಲಟ್ ಆಶ್ಚರ್ಯಕರ ರೀತಿಯಲ್ಲಿ ವಿಮಾನ ಪತನಗೊಳ್ಳುವ ಮುನ್ನವೇ ಪ್ಯಾರಾಚೂಟ್ ಸಹಾಯದಿಂದ ಹೊರಬಂದಿದ್ದು, ವಿಮಾನ ನೆಲಕ್ಕಪ್ಪಳಿಸಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಭಾರತೀಯ ವಾಯು ಸೇನೆಯ ವಕ್ತಾರ ಕರ್ನಲ್ ಎಸ್ ಡಿ ಗೋಸ್ವಾಮಿ ಅವರು, ಬೆಳಗ್ಗೆ 10.59ರ ವೇಳೆಯಲ್ಲಿ ಮಿಗ್-21 ಬೈಸನ್ ವಿಮಾನ ಶ್ರೀನಗರ ಸಾಯ್ ಬಾಗ್ ಬಳಿ ಪತನವಾಗಿದ್ದು, ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಗೆ ಸಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದರು.
Advertisement