ತಿರುಪತಿ ಲಡ್ಡು ಉಚಿತ..!

ತಿರುಪತಿ ಎಂದಾಕ್ಷಣ ಪ್ರತಿಯೊಬ್ಬರಿಗೂ ಮೊದಲು ತಲೆಗೆ ಬರುವುದು ತಿಮ್ಮಪ್ಪ ಹಾಗೂ ದೇವಾಲಯದಲ್ಲಿ ಸಿಗುವ ಸ್ವಾದಿಷ್ಟಕರ ತಿರುಪತಿ ಲಡ್ಡು. ತಿರುಪತಿ ಲಡ್ಡು ತಿನ್ನಬೇಕಾದರೆ ತಿರುಪತಿಗೇ ಹೋಗಬೇಕು. ತಿರುಪತಿ ಲಡ್ಡುವಿನಲ್ಲಿ ಸಿಗುವ ರುಚಿ ಬೇರೆಲ್ಲೂ ಸಿಗುವುದಿಲ್ಲ ಎಂಬ ಭಾವನೆ ಪ್ರತಿಯೊಬ್ಬರಲ್ಲೂ...
ತಿರುಪತಿ ಲಡ್ಡು ಉಚಿತ..! (ಸಂಗ್ರಹ ಚಿತ್ರ)
ತಿರುಪತಿ ಲಡ್ಡು ಉಚಿತ..! (ಸಂಗ್ರಹ ಚಿತ್ರ)

ತಿರುಪತಿ ಎಂದಾಕ್ಷಣ ಪ್ರತಿಯೊಬ್ಬರಿಗೂ ಮೊದಲು ತಲೆಗೆ ಬರುವುದು ತಿಮ್ಮಪ್ಪ ಹಾಗೂ ದೇವಾಲಯದಲ್ಲಿ ಸಿಗುವ ಸ್ವಾದಿಷ್ಟಕರ ತಿರುಪತಿ ಲಡ್ಡು. ತಿರುಪತಿ ಲಡ್ಡು ತಿನ್ನಬೇಕಾದರೆ ತಿರುಪತಿಗೇ ಹೋಗಬೇಕು. ತಿರುಪತಿ ಲಡ್ಡುವಿನಲ್ಲಿ ಸಿಗುವ ರುಚಿ ಬೇರೆಲ್ಲೂ ಸಿಗುವುದಿಲ್ಲ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಇದೆ. ತಿಮ್ಮಪ್ಪನ ಲಡ್ಡು ತಿನ್ನುವ ಸಲುವಾಗಿಯೇ ಸಾಕಷ್ಟು ಮಂದಿ ತಿರುಪತಿಗೆ ಹೋಗುವುದುಂಟು. ಭಾರತದಲ್ಲಿ ಅತೀ ಶ್ರೀಮಂತ ದೇಗುಲಗಳಲ್ಲಿ ಒಂದಾದ ತಿರುಪತಿಗೆ ಪ್ರತೀ ವರ್ಷ ಕೋಟ್ಯಾಂತರ ರುಪಾಯಿ ಆದಾಯ ಲಡ್ಡುಗಳಿಂದಲೇ ಬರುತ್ತಿದೆ. ತಿಮ್ಮಪ್ಪನ ದರ್ಶನಕ್ಕೆ ಹೋಗುವವರು ದುಬಾರಿ ಹಣವನ್ನು ಕೊಟ್ಟು ಲಡ್ಡು ತೆಗೆದುಕೊಂಡು ಬರುವುದುಂಟು. ಆದರೆ, ಇಂತಹ ಲಡ್ಡುವನ್ನು ಉಚಿತವಾಗಿ ನೀಡುತ್ತಾರೆ ಎಂದರೆ ನಂಬಲು ಸಾಧ್ಯವೇ...

ಹೌದು ನಂಬಲೇಬೇಕು. ಇನ್ನು ಮುಂದೆ ತಿರುಪತಿಗೆ ಹೋಗುವ ಪ್ರತಿಯೊಬ್ಬ ಭಕ್ತರಿಗೂ 100 ಗ್ರಾಂನ ಒಂದು ಲಡ್ಡು ಉಚಿತವಾಗಿ ಸಿಗಲಿದೆ. ಇಷ್ಟು ದಿನ ಕೇವಲ ಗಣ್ಯರಿಗೆ ಹಾಗೂ ಕಾಲ್ನಡಿಗೆಯಿಂದ ದೇವಾಲಯಕ್ಕೆ ಹೋಗುವ ಭಕ್ತರಿಗೆ ಮಾತ್ರ ಲಡ್ಡು ನೀಡಲಾಗುತ್ತಿತ್ತು. ಇದೀಗ ಟಿಡಿಪಿ ಆಡಳಿತ ಮಂಡಳಿಯವರು ಸಾಮಾನ್ಯ ಭಕ್ತರಿಗೂ ಸಹ ಉಚಿತ ಲಡ್ಡು ನೀಡಲು ಮುಂದಾಗಿದ್ದು, ಇನ್ನು ಮುಂದೆ ತಿರುಪತಿಗೆ ಹೋಗುವ ಪ್ರತಿಯೊಬ್ಬರೂ ಬಾಯಿ ಸಿಹಿ ಮಾಡಿಕೊಳ್ಳುವ ಅವಕಾಶವನ್ನು ಟಿಟಿ ಒದಗಿಸಿದೆ.

ಈ ಕುರಿತಂತೆ ಮಾತನಾಡಿರುವ ಟಿಟಿಡಿ ಅಧ್ಯಕ್ಷ ಚಂದಲವಾಡ ಕೃಷ್ಣ ಮೂರ್ತಿ ಅವರು, ತಿರುಪತಿಯಲ್ಲಿ ಇದೀಗ ಸಾವಿರ ಕಂಬಗಳ ಮಂಟಪ ನಿರ್ಮಾಣದ ಕುರಿತಂತೆ ಚಿಂತನೆ ನಡೆಸಲಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಮಂಟಪಕ್ಕೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶಂಕು ಸ್ಥಾಪನೆ ಮಾಡಲಿದ್ದಾರೆ. ಪ್ರಸ್ತುತ ವಿನ್ಯಾಸಗೊಳಿಸಿರುವ ಮಂಟಪದಲ್ಲಿ 7000 ಜನರಿರಲು ಸ್ಥಳಾವಾಕಾಶವಿದೆ. ಈ ಮಂಟಪದಲ್ಲಿ ಕೆಲವು ಬದಲಾವಣೆ ಮಾಡುವ ಅಗತ್ಯವಿದ್ದು, ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಇದಲ್ಲದೆ, ಭಕ್ತರಿಗೆ ಹೊಸ ವ್ಯವಸ್ಥೆ ನೀಡಲು ಅಧಿಕಾರಿಗಳು ಚಿಂತನೆ ನಡೆಸಿದ್ದು, ಇನ್ನು ಮುಂದೆ ತಿರುಪತಿಗೆ ಬರುವ ಎಲ್ಲಾ ಭಕ್ತರಿಗೂ 100 ಗ್ರಾಂನ ಒಂದು ಲಡ್ಡುವನ್ನು ಉಚಿತವಾಗಿ ನೀಡಲಾಗುವುದು. ಹೆಚ್ಚುವರಿ ಲಡ್ಡುಗಳು ಬೇಕೆಂದರೆ ಪ್ರತೀ ಸಲದಂತೆ ದುಡ್ಡು ನೀಡಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com