ಒಆರ್ ಒಪಿ ಜಾರಿ ಬಗ್ಗೆ ರಕ್ಷಣಾ ಸಚಿವರ ಸುಳಿವು

ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸುಳಿವು ನೀಡಿದ್ದಾರೆ.
ಮನೋಹರ್ ಪರಿಕ್ಕರ್
ಮನೋಹರ್ ಪರಿಕ್ಕರ್

ನವದೆಹಲಿ: ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸುಳಿವು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಈ ತಿಂಗಳ 15 ರಂದೇ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ. ಯೋಜನೆ ಶೀಘ್ರವೇ ಜಾರಿಗೊಳ್ಳಲಿದೆ ಎಂದು ಮನೋಹರ್ ಪರಿಕ್ಕರ್ ಹೇಳಿದ್ದಾರೆ.

ಯೋಜನೆಯನ್ನು ಅಂತಿಮಗೊಳಿಸುವುದಕ್ಕೆ ಸರ್ಕಾರಕ್ಕೆ ಕಾಲಾವಕಾಶ ನೀಡಬೇಕೆಂದು ಮನೋಹರ್ ಪರಿಕ್ಕರ್ ಪ್ರತಿಭಟನಾ ನಿರತ ನಿವೃತ್ತ ಯೋಧರಿಗೆ ಮನವಿ ಮಾಡಿದ್ದಾರೆ. ಒಆರ್ ಒಪಿ ಯೋಜನೆ ಬಗ್ಗೆ ಪ್ರಧಾನಿ ಕಾರ್ಯಾಲಯ ಸ್ವತಃ ಆಸಕ್ತಿ ವಹಿಸಿದ್ದು, ಶೀಘ್ರವೆ ನಿವೃತ್ತ ಯೋಧರ ಬೇಡಿಕೆ ಈಡೇರಲಿದೆ ಎಂದು ಪರಿಕ್ಕರ್ ತಿಳಿಸಿದ್ದಾರೆ. ಗುರುವಾರ ರಾತ್ರಿ ಪ್ರತಿಭಟನಾ ನಿರತ ನಿವೃತ್ತ ಯೋಧರ ಪ್ರತಿನಿಧಿಯೊಂದಿಗೆ ಮನೋಹರ್ ಪರಿಕ್ಕರ್ ಮಾತುಕತೆ ನಡೆಸಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com