ಗುಜರಾತ್ ಪರಿಸ್ಥಿತಿಗೆ ಮೋದಿ ರಾಜಕೀಯ ಆಟವೇ ಕಾರಣ: ರಾಹುಲ್

ಸಂಸತ್ ಗದ್ದಲದ ನಂತರ ಮತ್ತೊಮ್ಮೆ ಮೋದಿ ವಿರುದ್ಧ ವಾಗ್ದಾಳಿಗೆ ಮುಂದಾಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಇದೀಗ ಪಟೇಲ್ ಸಮುದಾಯದ ಹೋರಾಟದಿಂದ ಗುಜರಾತ್ ನಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಗೆ ಮೋದಿ ಅವರ ರಾಜಕೀಯ ಆಟವೇ ಕಾರಣ ಎಂದು ಶುಕ್ರವಾರ ಹೇಳಿದ್ದಾರೆ...
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ (ಸಂಗ್ರಹ ಚಿತ್ರ)

ಶ್ರೀನಗರ: ಸಂಸತ್ ಗದ್ದಲದ ನಂತರ ಮತ್ತೊಮ್ಮೆ ಮೋದಿ ವಿರುದ್ಧ ವಾಗ್ದಾಳಿಗೆ ಮುಂದಾಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಇದೀಗ ಪಟೇಲ್ ಸಮುದಾಯದ ಹೋರಾಟದಿಂದ ಗುಜರಾತ್ ನಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಗೆ ಮೋದಿ ಅವರ ರಾಜಕೀಯ ಆಟವೇ ಕಾರಣ ಎಂದು ಶುಕ್ರವಾರ ಹೇಳಿದ್ದಾರೆ.

ಈ ಕುರಿತಂತೆ ಜಮ್ಮ ಮತ್ತು ಕಾಶ್ಮೀರದಲ್ಲಿ ಮಾತನಾಡಿರುವ ಅವರು, ಮೋದಿ ಅವರು ದ್ವೇಷದ ರಾಜಕೀಯವನ್ನು ಮಾಡುತ್ತಿದ್ದು, ಅವರ ಕೋಪದ ರಾಜಕೀಯದ ಪರಿಣಾಮ ದೇಶದ ಜನತೆ ಮೇಲೆ ಬೀರುತ್ತಿದೆ. ಇದೀಗ ಗುಜರಾತ್ ನಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಗೆ ಮೋದಿ ಅವರ ರಾಜಕೀಯವೇ ಕಾರಣವಾಗಿದೆ. ಜನರಲ್ಲಿರುವ ಕೋಪವನ್ನು ಅತಿರೇಖಕ್ಕೇರಿಸಿ ಪ್ರತಿಭಟನೆ ನಡೆಯುವಂತೆ ಮಾಡುವುದು ಮತ್ತು ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುವಂತೆ ಮಾಡುವುದು ಅವರ ಉದ್ದೇಶವಾಗಿದೆ. ಈ ಸತ್ಯ ನಮಗೆ ತಿಳಿದಿದೆ. ಇಂತಹ ಪ್ರತಿಭಟನೆ, ಹಿಂಸಾಚಾರಗಳು ಮೋದಿ ಅವರಿಗೆ ಬಿಟ್ಟು ಬೇರಾರಿಗೂ ಪ್ರಯೋಜನವಿಲ್ಲ. ಗುಜರಾತ್ ನಲ್ಲಾಗುತ್ತಿರುವ ಹಿಂಸಾಚಾರವನ್ನು ಇಲ್ಲಿ ನಾವು ಗಮನಿಸುತ್ತಲೇ ಇದ್ದೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಎನ್ ಡಿಎ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್, ಎನ್ ಡಿಎ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದ್ದು. ಇದೊಂದು ಸೂಟುಬೂಟು ಸರ್ಕಾರವೆಂದು ನಾವು ತಿಳಿದುಕೊಂಡಿದ್ದೆವು. ಆದರೆ, ಇತ್ತೀಚೆಗಷ್ಟೇ ಈ ಸರ್ಕಾರ ಮತ್ತೊಂದು ಮುಖವೂ ತಿಳಿಯಿತು. ಎನ್ ಡಿಎ ಸರ್ಕಾರ ಕೇವಲ 5 ಅಥವಾ 10ಜನರಿಗೆ ಮಾತ್ರವಿರುವ ಸರ್ಕಾರವೆಂದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com