ಹಿಂಸಾಚಾರಕ್ಕೆ ತಿರುಗಿದ ಪಟೇಲ್ ಹೋರಾಟ: 3 ಕಡೆ ಕರ್ಫ್ಯೂ ಜಾರಿ

ಗುಜರಾತ್ ನ ಪ್ರಭಾವಿ ಪಟೇಲ್ ಸಮುದಾಯಕ್ಕೆ ಸರ್ಕಾರಿ ನೌಕರಿ ಹಾಗೂ ಶಾಲಾ, ಕಾಲೇಜುಗಳ ಪ್ರವೇಶದಲ್ಲಿ ಮೀಸಲಾತಿಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಪಟೇಲ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಇದೀಗ ಹಿಂಸಾಚಾರಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ...
ಪ್ರತಿಭಟನೆ ವೇಳೆ ಕಾರಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು (ಫೋಟೋ ಕೃಪೆ: ಪಿಟಿಐ)
ಪ್ರತಿಭಟನೆ ವೇಳೆ ಕಾರಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು (ಫೋಟೋ ಕೃಪೆ: ಪಿಟಿಐ)

ಅಹ್ಮದಾಬಾದ್: ಗುಜರಾತ್  ನ ಪ್ರಭಾವಿ ಪಟೇಲ್ ಸಮುದಾಯಕ್ಕೆ ಸರ್ಕಾರಿ ನೌಕರಿ ಹಾಗೂ ಶಾಲಾ, ಕಾಲೇಜುಗಳ ಪ್ರವೇಶದಲ್ಲಿ ಮೀಸಲಾತಿಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಪಟೇಲ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಇದೀಗ ಹಿಂಸಾಚಾರಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು 3 ಪ್ರದೇಶಗಳಲ್ಲಿ ಶುಕ್ರವಾರ ಕರ್ಫ್ಯೂ ಜಾರಿ ಮಾಡಿದ್ದಾರೆ.

ಗುಜರಾತ್ ನ ಪ್ರಭಾವಿ ಸಮುದಾಯವಾಗಿರುವ ಪಟೇಲ್ ಸಮುದಾಯವನ್ನು ಒಬಿಸಿ ವರ್ಗಕ್ಕೆ ಸೇರ್ಪಡೆ ಮಾಡಬೇಕೆಂದು ಕೋರಿ ಪಟೇಲ್ ಸಮುದಾಯದ ಜನತೆ ಆಗಸ್ಟ್ 25 ರಂದು ಪ್ರತಿಭಟನೆಗಿಳಿದಿತ್ತು. ಈ ಪ್ರತಿಭಟನೆಯು ಗುಜರಾತ್, ಅಹ್ಮದಾಬಾದ್ ಹಾಗೂ ಸೂರತ್ ನಲ್ಲಿಯೂ ನಡೆಯಿತು. ಆದರೆ, ದಿನಕಳೆಯುತ್ತಿದ್ದಂತೆ ಈ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪ್ರತಿಭಟನೆಯ ಪ್ರಮುಖ ರುವಾರಿಯಾಗಿದ್ದ ಹಾರ್ದಿಕ್ ಪಟೇಲ್ ಅವರನ್ನು ಬಂಧನಕ್ಕೊಳಪಡಿಸಿದ್ದರು.

ನಂತರ ಹಾರ್ದಿಕ್ ಪಟೇಲ್ ಅವರನ್ನು ಬಿಡುಗಡೆ ಮಾಡಿತ್ತು. ಆದರೆ, ಇದೀಗ ಪಟೇಲ್ ಸಮುದಾಯದ ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನೆಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಅಹ್ಮದಾಬಾದ್ ನ ಸುಮಾರು 3 ಪ್ರದೇಶಗಳಲ್ಲಿ ಅಧಿಕಾರಿಗಳು ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com