ರಕ್ಷಾ ಬಂಧನ: ಸಚಿವ ವೆಂಕಯ್ಯ ನಾಯ್ಡುಗೆ ರಾಖಿ ಕಟ್ಟಿದ ಸುಷ್ಮಾ ಸ್ವರಾಜ್

ಶನಿವಾರ ರಕ್ಷಾಬಂಧನ. ಸಹೋದರ-ಸಹೋದರಿಯರ ಬಾಂಧವ್ಯವನ್ನು ಬೆಸೆಯುವ ಹಬ್ಬ ರಕ್ಷಾ ಬಂಧನವನ್ನು...
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರಿಗೆ ರಾಖಿ ಕಟ್ಟಿದರು
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರಿಗೆ ರಾಖಿ ಕಟ್ಟಿದರು
Updated on: 

ನವದೆಹಲಿ: ಶನಿವಾರ ರಕ್ಷಾಬಂಧನ. ಸಹೋದರ-ಸಹೋದರಿಯರ ಬಾಂಧವ್ಯವನ್ನು ಬೆಸೆಯುವ ಹಬ್ಬ ರಕ್ಷಾ ಬಂಧನವನ್ನು ರಾಜಕೀಯ ಗಣ್ಯರು ಕೂಡ ತಮ್ಮ ಬಿಡುವಿಲ್ಲದ ವೇಳೆಯಲ್ಲಿ ಸಮಯ ಹೊಂದಿಸಿಕೊಂಡು ಆಚರಿಸಿಕೊಂಡಿದ್ದಾರೆ.

ಇಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರಿಗೆ ರಾಖಿ ಕಟ್ಟಿದರು.ಈ ಸಂದರ್ಭದಲ್ಲಿ ಮಾತನಾಡಿದ ಸುಷ್ಮಾ ಸ್ವರಾಜ್, ಇಡೀ ವಿಶ್ವದಲ್ಲೇ ಭಾರತೀಯ ಸಂಸ್ಕೃತಿ ವಿಶಿಷ್ಟವಾದದ್ದು. ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಭಾರತದ ಅಭಿವೃದ್ಧಿಗೆ ಶ್ರಮಿಸೋಣ. ರಾಖಿ  ಹಬ್ಬದ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯಗಳು ಎಂದು ಹೇಳಿದರು.

ಪ್ರೀತಿ, ಬಾಂಧವ್ಯದ ದ್ಯೋತಕವಾಗಿ ಸಹೋದರಿ, ಸಹೋದರನಿಗೆ ರಾಖಿ ಕಟ್ಟಿ ಅವರ ಮುಂದಿನ ಜೀವನ ಆಯುರಾರೋಗ್ಯ, ಸುಖ, ನೆಮ್ಮದಿಯಿಂದ ಕೂಡಲಿ ಎಂದು ಹಾರೈಸುವ ಹಬ್ಬವೇ ರಕ್ಷಾ ಬಂಧನ. ಈ ಸಂದರ್ಭದಲ್ಲಿ ದೇಶದ ಜನತೆಗೆ ಹಾರೈಸುತ್ತೇನೆ ಎಂದು ಹೇಳಿದರು.

ರಕ್ಷಾ ಬಂಧನವನ್ನು ಮುಖ್ಯವಾಗಿ ಭಾರತ, ಮಾರಿಷಸ್ ಮತ್ತು ನೇಪಾಳ ದೇಶದ ಕೆಲವು ಭಾಗಗಳಲ್ಲಿ, ಪಾಕಿಸ್ತಾನದಲ್ಲಿ ಹಿಂದೂಗಳು ಮತ್ತು ಸಿಖ್ಖರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಆಚರಿಸುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com