ವಿಶೇಷ ಸ್ಥಾನಮಾನ ಕೋರಿ ಇಂದು ಆಂಧ್ರಪ್ರದೇಶ ಬಂದ್

ವಿಭಜಿತ ಆಂಧ್ರಪ್ರದೇಶಕ್ಕೆ ವಿಷೇಷ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಶನಿವಾರ ನಡೆಯುತ್ತಿರುವ ಬಂದ್ ಆಚರಣೆಯಲ್ಲಿ ಯಾವುದೇ ರೀತಿಯ ಅಹಿತಕರ ನಡೆಯದಿರಲು ಕ್ರಮ ಕೈಗೊಂಡಿರುವ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 250ಕ್ಕೂ ಹೆಚ್ಚು...
ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ವೈ.ಎಸ್.ಜಗನ್ ಮೋಹನ್ (ಸಂಗ್ರಹ ಚಿತ್ರ)
ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ವೈ.ಎಸ್.ಜಗನ್ ಮೋಹನ್ (ಸಂಗ್ರಹ ಚಿತ್ರ)

ವಿಜಯವಾಡ: ವಿಭಜಿತ ಆಂಧ್ರಪ್ರದೇಶಕ್ಕೆ ವಿಷೇಷ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಶನಿವಾರ ನಡೆಯುತ್ತಿರುವ ಬಂದ್ ಆಚರಣೆಯಲ್ಲಿ ಯಾವುದೇ ರೀತಿಯ ಅಹಿತಕರ ನಡೆಯದಿರಲು ಕ್ರಮ ಕೈಗೊಂಡಿರುವ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 250ಕ್ಕೂ ಹೆಚ್ಚು ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

ವಿಶಾಕಪಟ್ಟಣ ಹಾಗೂ ವಿಜಯವಾಡದಲ್ಲಿ ಈಗಾಗಲೇ 250 ಕ್ಕೂ ಹೆಚ್ಚು ಮಂದಿಯನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು ಆಂಧ್ರಪ್ರದೇಶದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದಾರೆ.

ವಿಶೇಷ ಸ್ಥಾನಮಾನ ಕೋರಿ ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಬಂದ್ ಆಚರಣೆ ಕುರಿತಂತೆ ಮಾತನಾಡಿರುವ ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ವೈ.ಎಸ್.ಜಗನ್ ಮೋಹನ್ ಅವರು, ಪ್ರತಿಭಟನೆಗೆ ಜನತೆ ಸಹಕರಿಸಬೇಕಿದ್ದು, ಬಂದ್ ಯಶಸ್ವಿಯಾಗುವಂತೆ ಮಾಡಲು ಮನವಿ ಮಾಡಿಕೊಂಡಿದ್ದಾರೆ.

ಬಂದ್ ಆಚರಣೆಗೆ ಈಗಾಗಲೇ ಹಲವು ಸಂಘಟನೆ ಹಾಗೂ ಸ್ಥಳೀಯ ಸಮುದಾಯಗಳು ಬೆಂಬಲ ವ್ಯಕ್ತಪಡಿಸಿದ್ದು, ವಿಶೇಷ ಸ್ಥಾನಮಾನ ಪ್ರತಿಭಟನೆ ಹಾಗೂ ಬಂದ್ ಆಚರಣೆ ಗಂಭೀರವ ವಿಚಾರವಾಗಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವ ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಿರುವ ಬಸ್ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದ್ದಾರೆಂದು ತಿಳಿದುಬಂದಿದೆ.

ಬಂದ್ ಆಚರಣೆಯಲ್ಲಿ ಈ ವರೆಗೂ ಯಾವುದೇ ಅಹಿತಕರ ಘಟನೆಯಾಗಲಿ, ಸಾವು ನೋವುಗಳಾಗಲಿ ಸಂಭವಿಸಿಲ್ಲ. ವಿಶಾಖಪಟ್ಟಣದ ಕೆಲವೆಡೆ ಬಸ್ ಸಂಚಾರ ಸಾಮಾನ್ಯವಾಗಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com