ಮೀಸಲಾತಿ ಪ್ರತಿಭಟನೆ ಹಿಂಸಾಚಾರದಿಂದ ದೇಶಕ್ಕೆ ಆಘಾತವಾಗಿದೆ: ಮೋದಿ

ಮೀಸಲಾತಿಗೆ ಆಗ್ರಹಿಸಿ ಗುಜರಾತ್ ನಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಇಡಿ ರಾಷ್ಟ್ರಕ್ಕೆ ಅಸಮಾಧಾನ ಉಂಟಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಮೀಸಲಾತಿಗೆ ಆಗ್ರಹಿಸಿ ಗುಜರಾತ್ ನಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಇಡಿ ರಾಷ್ಟ್ರಕ್ಕೆ ಅಸಮಾಧಾನ ಉಂಟಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಎಲ್ಲಾ ಸಮಸ್ಯೆಗಳನ್ನು ಅಭಿವೃದ್ಧಿ ಮೂಲಕ ಬಗೆಹರಿಸಿಕೊಳ್ಳುವಂತೆ ದೇಶದ ಜನತೆಗೆ ಕರೆ ನೀಡಿದ್ದಾರೆ. ಗಾಂಧಿ, ಸರ್ದಾರ್ ಪಟೇಲ್ ಅವರ ರಾಜ್ಯದಲ್ಲಿ ಹಿಂಸಾಚಾರ ನಡೆದಿರುವುದರಿಂದ ನೋವುಂಟಾಗಿದೆ. ಶಾಂತಿ, ಒಗ್ಗಟ್ಟು, ಹಾಗೂ ಭ್ರಾತೃತ್ವ ಸರಿಯಾದ ಮಾರ್ಗ, ನಾವು ಅಭಿವೃದ್ಧಿ ಪಥದಲ್ಲೇ ಮುಂದುವರೆದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದಿದ್ದಾರೆ ಮೋದಿ.   

ಗುಜರಾತ್ ಜನತೆಯ ಸಹಕಾರದಿಂದ ಹಿಂಸಾಚಾರ ನಿಯಂತ್ರಿಸಲು ಸಾಧ್ಯವಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ನನ್ನ ಗುಜರಾತ್ ಸಹೋದರರು ಪರಿಸ್ಥಿತಿ ವಿಕೋಪಕ್ಕೆ ತಿರುಗಲು ಅವಕಾಶ ನೀಡದೇ ಹಿಂಸಾಚಾರವನ್ನು ತಡೆಗಟ್ಟಿದ್ದಾರೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

ಪಟೇಲ್ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ನಡೆಸುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಮೋದಿ, ಎಲ್ಲಾ ಸಮಸ್ಯೆಗಳಿಗೂ ಅಭಿವೃದ್ಧಿಯೊಂದೇ ಮಾರ್ಗ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com