ಜೀವಕ್ಕೇನಾದರೂ ಆದರೆ, ಸರ್ಕಾರವೇ ಹೊಣೆ

ಸಮಾನ ಹುದ್ದೆ, ಸಮಾನ ಪಿಂಚಣಿ ಜಾರಿಗಾಗಿ ಹೋರಾಡುತ್ತಿರುವ ನಿವೃತ್ತ ಸೇನಾನಿಗಳು ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ತೀವ್ರ ಒತ್ತಡಕ್ಕೆ ಸಿಲುಕಿದೆ...
ಪ್ರತಿಭಟನಾ ನಿರತ ನಿವೃತ್ತ ಯೋಧರು (ಸಂಗ್ರಹ ಚಿತ್ರ)
ಪ್ರತಿಭಟನಾ ನಿರತ ನಿವೃತ್ತ ಯೋಧರು (ಸಂಗ್ರಹ ಚಿತ್ರ)

ನವದೆಹಲಿ: ಸಮಾನ ಹುದ್ದೆ, ಸಮಾನ ಪಿಂಚಣಿ ಜಾರಿಗಾಗಿ ಹೋರಾಡುತ್ತಿರುವ ನಿವೃತ್ತ ಸೇನಾನಿಗಳು ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ತೀವ್ರ ಒತ್ತಡಕ್ಕೆ ಸಿಲುಕಿದೆ.

14 ದಿನಗಳಿಂದ ಉಪವಾಸ ಕುಳಿತಿರುವ ನಿವೃತ್ತ ಹವಾಲ್ದಾರ್ ಮೇಜರ್ ಸಿಂಗ್ ಅವರ ಆರೋಗ್ಯ ಶನಿವಾರ ಹದಗೆಟ್ಟಿದ್ದು, ಒತ್ತಾಯಪೂರ್ವಕವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ, ನಿರಶನ ನಿರತರ ಜೀವಕ್ಕೇನಾದರೂ ಅಪಾಯವಾದರೆ, ಅದಕ್ಕೆ ಸರ್ಕಾರವೇ ಹೊಣೆ ಎಂದು ನಿವೃತ್ತ ಸೇನಾನಿಗಳು ಎಚ್ಚರಿಸಿದ್ದಾರೆ. ಈ ನಡುವೆ, ಪ್ರತಿಭಟನಾನಿರತರು  ಅಸ್ವಸ್ಥರಾಗುತ್ತಿರುವ ಬಗ್ಗೆ ನಿವೃತ್ತ ಯೋಧರ ಒಕ್ಕೂಟ ಶನಿವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದಿದೆ.

``ಹವಾಲ್ದಾರ್ ಮೇಜರ್ ಸಿಂಗ್ ಅವರು ಆ.16ರಿಂದಲೇ ಆಮರಣಾಂತ ಉಪವಾಸ ಮಾಡುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಅಪಾಯಕಾರಿ ಮಟ್ಟ ತಲುಪಿದೆ ಎಂದು ವೈದ್ಯರು ಹೇಳಿದ್ದಾರೆ.  ಅವರು ಬದುಕುಳಿಯ ಬೇಕಾದರೆ ಆಸ್ಪತ್ರೆಗೆ ದಾಖಲಿಸಲೇಬೇಕು'' ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದೇ ವೇಳೆ, ನಿರಶನನಿರತ ಸೇನಾನಿಗಳು ಜಂತರ್‍ಮಂತರ್ ನಲ್ಲೇ ರಾಖಿಹಬ್ಬ ಆಚರಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com