ಒಆರ್‍ಒಪಿ: ಮತ್ತೊಬ್ಬ ಮಾಜಿ ಯೋಧ ಅಸ್ವಸ್ತ

ಸಮಾನ ಹುದ್ದೆಗೆ ಸಮಾನ ಪಿಂಚಣಿ ಶೀಘ್ರ ಜಾರಿಗೆ ಆಗ್ರಹಿಸಿ ಜಂತರ್‍ಮಂತರ್‍ನಲ್ಲಿ ನಿರಶನ ನಡೆಸುತ್ತಿರುವ...
ಪ್ರತಿಭಟನಾ ನಿರತ ಮಾಜಿ ಯೋಧರು
ಪ್ರತಿಭಟನಾ ನಿರತ ಮಾಜಿ ಯೋಧರು

ನವದೆಹಲಿ: ಸಮಾನ ಹುದ್ದೆಗೆ ಸಮಾನ ಪಿಂಚಣಿ ಶೀಘ್ರ ಜಾರಿಗೆ ಆಗ್ರಹಿಸಿ ಜಂತರ್‍ಮಂತರ್‍ನಲ್ಲಿ ನಿರಶನ ನಡೆಸುತ್ತಿರುವ ಮಾಜಿ ಯೋಧರಲ್ಲಿ ಮತ್ತೊಬ್ಬರು ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಸಮೀಪದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಜಿ ಯೋಧರ ಧರಣಿ 77ನೇ ದಿನಕ್ಕೆ ಕಾಲಿಟ್ಟ ಸಂದರ್ಭದಲ್ಲಿಯೇ ಹಿರಿಯ ಮಾಜಿ ಯೋಧ ಹವಿಲ್ದಾರ್ ಬಾಲ್ ಸಿಂಗ್ ತೀವ್ರ ಬಳಲಿಕೆಯಿಂದ ಅಸ್ವಸ್ಥಗೊಂಡಿದ್ದು, ವೇದಿಕೆ ಮೇಲೇ ಕುಸಿದುಬಿದ್ದ ಅವರ ಸ್ಥಿತಿ ಸದ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.

ಯೋಧರ ಹಲವು ದಿನಗಳ ಹೋರಾಟದ ಬಳಿಕವೂ ಕೇಂದ್ರ ಸರ್ಕಾರ ತಮ್ಮ ಬೇಡಿಕೆ ಈಡೇರಿಕೆಗೆ ಮುಂದಾಗಿಲ್ಲದ ಹಿನ್ನೆಲೆಯಲ್ಲಿ ಶನಿವಾರವಷ್ಟೇ ಹವಿಲ್ದಾರ್ ಬಾಲ್ ಸಿಂಗ್, ಸೇನಾ ಮಹಾದಂಡ ನಾಯಕರೂ ಆದ ರಾಷ್ಟ್ರಪತಿ ಪ್ರಣಬ್‍ಗೆ ಪತ್ರ ಬರೆದು, ಸರ್ಕಾರದ ನಿರ್ಲಕ್ಷ್ಯದಿಂದ ಧರಣಿನಿರತರಿಗೆ ಮುಂದೆ ಆಗಬಹುದಾದ ತೊಂದರೆ, ಅನಾಹುತಗಳಿಗೆ ಸರ್ಕಾರವೇ ಹೊಣೆ ಎಂದು ಹೇಳಿದ್ದರು.

ಅದರ ಬೆನ್ನಲೇ ಈಗ ಮತ್ತೊಬ್ಬ ಮಾಜಿ ಯೋಧ ಸುದೀರ್ಘ ಅವಧಿಯ ಉಪವಾಸದಿಂದಾಗಿ ತೀವ್ರ ಅಸ್ವಸ್ಥಗೊಂಡಿದ್ದಾರೆ. ಧರಣಿನಿರತ ಮಾಜಿ ಸೇನಾನಿಗಳ ಬೇಡಿಕೆ ವಿಷಯದಲ್ಲಿ ಇದ್ದ ಅಂತರವನ್ನು ಸಾಕಷ್ಟು ಕುಗ್ಗಿಸಿದ್ದು, ಶೀಘ್ರವೇ ಸರ್ಕಾರ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಶನಿವಾರಷ್ಟೇ ಹೇಳಿತ್ತು. ಆದರೆ, ತಮ್ಮ ಪಟ್ಟು ಸಡಿಲಿಸದ ಯೋಧರು ಧರಣಿ ಮುಂದುವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com