ಸೆಲ್ಜಾ ಹೇಳಿಕೆ ಸಂಬಂಧ ಮೇಲ್ಮನೆಯಲ್ಲಿ ಗದ್ದಲ

ಮಾಜಿ ಸಚಿವೆ ಕುಮಾರಿ ಸೆಲ್ಜಾ ಅವರ ಗುಜರಾತ್ ಭೇಟಿ ಹೇಳಿಕೆ ವಿಚಾರದಲ್ಲಿ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಮತ್ತು ಪಿಯೂಶ್ ಗೋಯಲ್ ಸದನದ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿ..
ರಾಜ್ಯಸಭೆ (ಸಂಗ್ರಹ ಚಿತ್ರ)
ರಾಜ್ಯಸಭೆ (ಸಂಗ್ರಹ ಚಿತ್ರ)

ನವದೆಹಲಿ: ಮಾಜಿ ಸಚಿವೆ ಕುಮಾರಿ ಸೆಲ್ಜಾ ಅವರ ಗುಜರಾತ್ ಭೇಟಿ ಹೇಳಿಕೆ ವಿಚಾರದಲ್ಲಿ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಮತ್ತು ಪಿಯೂಶ್ ಗೋಯಲ್ ಸದನದ ದಾರಿ ತಪ್ಪಿಸುತ್ತಿದ್ದಾರೆ  ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದರಿಂದ ರಾಜ್ಯಸಭೆ ಕಲಾಪವನ್ನು ಬುಧವಾರ ಮೂರು ಸಲ ಮುಂದೂಡಲಾಯಿತು.

ಮಂಗಳವಾರ ಅಸಹಿಷ್ಣುತೆ ಕುರಿತ ಚರ್ಚೆ ವೇಳೆ ಸೆಲ್ಜಾ ಅವರು, ``ಯಪಿಎ ಸಚಿವೆಯಾಗಿದ್ದಾಗ ನಾನು ಗುಜರಾತ್‍ನ ದ್ವಾರಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ. ಆಗ ನನ್ನ ಜಾತಿ ಕೇಳಲಾಗಿತ್ತು''  ಎಂದಿದ್ದರು. ನಂತರ ದ್ವಾರಕಾ ದೇವಸ್ಥಾನದ ಸಂದರ್ಶಕರ ಪುಸ್ತಕದಲ್ಲಿ ಸೆಲ್ಜಾ ಬರೆದಿದ್ದ ಒಳ್ಳೆಯ ಅಭಿಪ್ರಾಯವನ್ನು ಸದನದಲ್ಲಿ ಓದಿದ ಅರುಣ್ ಜೇಟ್ಲಿ, ``ಸೆಲ್ಜಾ ಅವರು ಕಾಂಪ್ಲಿಮೆಂಟರಿ ಮಾತನಾಡಿದ್ದಾರೆ'' ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು.

ಅದಕ್ಕೆ ಸೆಲ್ಜಾ, ``ನಾನು  ಹೇಳಿದ್ದು ಮುಖ್ಯ ದೇವಸ್ಥಾನದ ಬಗ್ಗೆಯಲ್ಲ, ಬೇಟ್ ದ್ವಾರಕ ಕುರಿತು. ನೀವು ನನ್ನ ಹೇಳಿಕೆ ತಿರುಚುತ್ತಿದ್ದೀರಿ'' ಎಂದು ಆಕ್ಷೇಪಿಸಿದ್ದರು. ಇದೇ ವೇಳೆ ಪಿಯೂಶ್ ಗೋಯಲ್  ಅವರು, ಕಾಂಗ್ರೆಸ್ ಸದಸ್ಯರು ``ಮ್ಯಾನುಫ್ಯಾಕ್ಚರ್ಡ್ ಪ್ರಾಬ್ಲೆಮ್ಸ್ ಮತ್ತು ಮ್ಯಾನುಫ್ಯಾಕ್ಚರ್ಡ್ ಡಿಸ್ ಕ್ರಿಮಿನೇಶನ್'' ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಚುಚ್ಚಿದ್ದರು. ಬುಧವಾರ ಕಲಾಪ  ಆರಂಭವಾಗುತ್ತಿದ್ದಂತೆ ಸಚಿವರಿಬ್ಬರ ಹೇಳಿಕೆಗಳನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಪ್ರತಿಭಟನೆ ಆರಂಭಿಸಿತು. ಹೀಗಾಗಿ ಭೋಜನ ವಿರಾಮಕ್ಕೆ ಮುನ್ನ ಮೂರು ಬಾರಿ ಕಲಾಪ ಮುಂದೂಡಲಾಯಿತು.

ಮಕ್ಕಳ ಮೇಲಿನ ದೌರ್ಜನ್ಯ ಶೇ.53 ಹೆಚ್ಚಳ
ಕಳೆದ ವರ್ಷ ದೇಶಾದ್ಯಂತ ಮಕ್ಕಳ ಮೇಲಿನ ದೌರ್ಜನ್ಯ ಶೇ.53ರಷ್ಟು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಮಾಣ ಶೇ.9ರಷ್ಟು ಹೆಚ್ಚಿದೆ ಎಂದು ರಾಜ್ಯಸಭೆಗೆ  ತಿಳಿಸಲಾಯಿತು. ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ (ಎನ್‍ಸಿಆರ್‍ಬಿ) ನೀಡಿದ ಅಂಕಿಅಂಶಗಳ ಪ್ರಕಾರ, ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ 89,423 ಪ್ರಕರಣಗಳು 2014ರಲ್ಲಿ ದಾಖಲಾಗಿದ್ದರೆ, 2013ರಲ್ಲಿ  ಈ ಪ್ರಮಾಣ 58,224 ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com