ಕಾಂಗ್ರೆಸ್ ನಾಯಕಿ ಸೆಲ್ಜಾ ವಿರುದ್ಧ ಹೇಳಿಕೆ ಹಿಂಪಡೆದ ಅರುಣ್ ಜೇಟ್ಲಿ

ಕಾಂಗ್ರೆಸ್ ನಾಯಕಿ ಕುಮಾರಿ ಸೆಲ್ಜಾ ವಿರುದ್ಧ ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಯನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ ಹಿಂಪಡೆದಿದ್ದಾರೆ...
ಬುಧವಾರ ಸಂಸತ್ತಿನಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕಿ ಕುಮಾರಿ ಸೆಲ್ವಾ
ಬುಧವಾರ ಸಂಸತ್ತಿನಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕಿ ಕುಮಾರಿ ಸೆಲ್ವಾ

ನವದೆಹಲಿ: ಕಾಂಗ್ರೆಸ್ ನಾಯಕಿ ಕುಮಾರಿ ಸೆಲ್ಜಾ ವಿರುದ್ಧ ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಯನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ ಹಿಂಪಡೆದಿದ್ದಾರೆ.

ಸಂಸತ್ತಿನಲ್ಲಿ ಚಳಿಗಾಲ ಅಧಿವೇಶನ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ವಿಷಯವನ್ನಿಡಿದು ಕಲಾಪಕ್ಕೆ ಅಡ್ಡಿ ಪಡೆಸುತ್ತಿರುವ ಪ್ರತಿಪಕ್ಷದ ಸದಸ್ಯರು ಇದೀಗ ಕಾಂಗ್ರೆಸ್ ನಾಯಕಿ ಕುಮಾರಿ ಸೆಲ್ಜಾ ವಿರುದ್ಧ ನೀಡಿದ್ದ ಹೇಳಿಕೆಯನ್ನು ಬಳಸಿಕೊಂಡು ಪ್ರತಿಭಟನೆ ನಡೆಸುತ್ತಿವೆ.

ಸಂಸತ್ತಿನಲ್ಲಿ ತೀವ್ರ ಗದ್ದಲ ಉಂಟಾದ ಕಾರಣ ಸೆಲ್ವಾ ಕುರಿತಂತೆ ನೀಡಿದ್ದ ಹೇಳಿಕೆಯನ್ನು ಇದೀಗ ಅರುಣ್ ಜೇಟ್ಲಿ ಅವರು ಹಿಂಪಡೆದಿದ್ದಾರೆ. ಜೇಟ್ಲ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದ ಕಾರಣ ಇದೀಗ ಕಾಂಗ್ರೆಸ್ ನಾಯಕರು ತಮ್ಮ ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.

ಸಂಸತ್ತಿನಲ್ಲಿ ಮಂಗಳವಾರ ನಡೆದ ಅಸಹಿಷ್ಣುತೆ ಕುರಿತ ಚರ್ಚೆ ವೇಳೆ ಮಾತನಾಡಿದ್ದ ಕಾಂಗ್ರೆಸ್ ಮಾಜಿ ಸಚಿವೆ ಕುಮಾರಿ ಸೆಲ್ವಾ ಅವರು, ಯುಪಿಎ ಸಚಿವೆಯಾಗಿದ್ದಾಗ ನಾನು ಗುಜರಾತ್‍ನ ದ್ವಾರಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ. ಆಗ ನನ್ನ ಜಾತಿ ಕೇಳಲಾಗಿತ್ತು''  ಎಂದಿದ್ದರು.

ಸೆಲ್ವಾ ಅವರ ಹೇಳಿಕೆ ಕೇಳಿದ ಅರುಣ್ ಜೇಟ್ಲಿ ಅವರು ದ್ವಾರಕಾ ದೇವಸ್ಥಾನದ ಸಂದರ್ಶಕರ ಪುಸ್ತಕದಲ್ಲಿ ಸೆಲ್ಜಾ ಬರೆದಿದ್ದ ಒಳ್ಳೆಯ ಅಭಿಪ್ರಾಯವನ್ನು ಸದನದಲ್ಲಿ ಓದಿದ್ದರು. ಅಲ್ಲದೇ, ಸೆಲ್ವಾ ಅವರು ಕಾಂಪ್ಲಿಮೆಂಟರಿ ಮಾತನಾಡಿದ್ದಾರೆ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದರು.

ಅದಕ್ಕೆ ಸೆಲ್ಜಾ, ``ನಾನು  ಹೇಳಿದ್ದು ಮುಖ್ಯ ದೇವಸ್ಥಾನದ ಬಗ್ಗೆಯಲ್ಲ, ಬೇಟ್ ದ್ವಾರಕ ಕುರಿತು. ನೀವು ನನ್ನ ಹೇಳಿಕೆ ತಿರುಚುತ್ತಿದ್ದೀರಿ'' ಎಂದು ಆಕ್ಷೇಪಿಸಿದ್ದರು. ಇದಕ್ಕುತ್ತರಿಸಿದ ಪಿಯೂಶ್ ಗೋಯಲ್ ಅವರು ಕಾಂಗ್ರೆಸ್ ಸದಸ್ಯರು ``ಮ್ಯಾನುಫ್ಯಾಕ್ಚರ್ಡ್ ಪ್ರಾಬ್ಲೆಮ್ಸ್ ಮತ್ತು ಮ್ಯಾನುಫ್ಯಾಕ್ಚರ್ಡ್ ಡಿಸ್ ಕ್ರಿಮಿನೇಶನ್'' ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ಸಚಿವರಿಬ್ಬರು ಸೆಲ್ವಾ ಬಗ್ಗೆ ನೀಡಿದ್ದ ಹೇಳಿಕೆಯನ್ನು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು ಕ್ಷಮೆಯಾಚಿಸುವಂತೆ ಸಂಸತ್ತಿನಲ್ಲಿ ಪ್ರತಿಭಟನೆಗಿಳಿದಿದ್ದರು.

ನಾಯಕರ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಉಪಾಧ್ಯಕ್ಷ ಪಿ.ಜೆ.ಕುರಿಯನ್ ಅವರು, ಹೇಳಿಕೆ ಬಗ್ಗೆ ಇಬ್ಬರು ನಾಯಕ ನಡುವೆ ಮಾತುಕತೆ ನಡೆಯುವ ವೇಳೆ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com