
ನವದೆಹಲಿ: ದೇಶದ ರಕ್ಷಣೆಗೆ ಸದಾ ಮುಂದೆ ನಿಲ್ಲುವ ಬಲಾಢ್ಯ ಮತ್ತು ಧೀರ ನೌಕಪಡೆ ಭಾರತ ದೇಶದ ಹೆಮ್ಮೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನೌಕಾಪಡೆಯ 44ನೇ ದಿನಾಚರಣೆಯ ಅಂಗವಾಗಿ ಭಾರತದ ಹೆಮ್ಮೆಯ ಮತ್ತು ಗರ್ವದ ಪ್ರತೀಕವಾಗಿರುವ ನೌಕದಳದ ಸಿಬ್ಬಂದಿಗಳಿಗೆ ಶುಭಾಶಯ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಎಂತಹುದೇ ಪರಿಸ್ಥಿತಿ ಬಂದರೂ ಸದಾಕಾಲ ದೇಶದ ರಕ್ಷಣೆಗೆ ಮುಂದೆ ಬರುವ ನಮ್ಮ ಬಲಾಢ್ಯ ನೌಕಾದಳ ದೇಶದ ಹೆಮ್ಮೆಯ ಪ್ರತೀಕ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ನೌಕಾದಳದ ಮುಖ್ಯಸ್ಥರಾದ ಅಡ್ಮಿರಲ್ ಆರ್ ಕೆ ಧೋವನ್ ಅವರು ಕೂಡ ನೌಕಾ ದಿನಾಚರಣೆಯ ಪ್ರಯುಕ್ತ ನೌಕಾದಳದ ಸಿಬ್ಬಂದಿಗಳಿಗೆ ಶುಭಾಶಯ ಕೋರಿದ್ದು, ದೇಶದ ರಕ್ಷಣೆಗೆ ತಾವು ಸದಾ ಸಿದ್ದ. ದೇಶದ ರಕ್ಷಣೆಗೆ ನಿಲ್ಲುವುದು ನಮ್ಮ ಕರ್ತವ್ಯ ಮತ್ತು ಈ ಮಹಾನ್ ದೇಶಕ್ಕಾಗಿ ದುಡಿಯುವುದು ನಮಗೆ ಹೆಮ್ಮೆ. ಪ್ರಸ್ತುತ ದೇಶದ ನೌಕಾದಳ ಅತ್ಯಂತ ಬಲಾಢ್ಯವಾಗಿದ್ದು, ಭಾರತದ ಆರ್ಥಿಕತೆಯೊಂದಿಗೆ ಅತಿಮುಖ್ಯವಾದ ಸಂಬಂಧವನ್ನು ಹೊಂದಿದೆ. ಶಾಂತಿ ಮತ್ತು ಯುದ್ಧ, ದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮುದ್ರ ಸಂಬಂಧಿತ ಹಿತಾಸಕ್ತಿಗಳಲ್ಲಿ ಭಾರತದ ಅಭಿವೃದ್ಧಿ ಮತ್ತು ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ವಾಯುಸೇನೆಯ ಮುಖ್ಯಸ್ಥರಾದ ಅರುಪ್ ರಹಾ ಅವರು ಕೂಡ ನೌಕಾಪಡೆಗೆ ತಮ್ಮ ಶುಭಾಶಯ ತಿಳಿಸಿದ್ದು, ನೌಕಾದಳ ಸಿಬ್ಬಂದಿಗಳಿಗೆ ಆರ್ ಕೆ ಧೋವನ್ ಅವರು ಇದೇ ಸಂದರ್ಭದಲ್ಲಿ ಅಮರ ಜವಾನರಿಗೆ ಗೌರವ ಸಲ್ಲಿಸಿದರು.
Advertisement