ಮೋದಿ ವೈಮಾನಿಕ ಸಮೀಕ್ಷೆ ಚಿತ್ರ ಎಡಿಟ್: ಪಿಐಬಿ ಎಡವಟ್ಟು

ಜಲಪ್ರವಾಹ ಉಂತಾಗಿರುವ ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದ ವೈಮಾನಿಕ ಸಮೀಕ್ಷೆಯ ಫೊಟೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪಿಐಬಿ ಎಡಿಟ್ ಮಾಡಿರುವ ಚಿತ್ರ(ಬಲಭಾಗ)
ಪಿಐಬಿ ಎಡಿಟ್ ಮಾಡಿರುವ ಚಿತ್ರ(ಬಲಭಾಗ)

ನವದೆಹಲಿ: ಜಲಪ್ರವಾಹ ಉಂತಾಗಿರುವ ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದ ವೈಮಾನಿಕ ಸಮೀಕ್ಷೆಯ ಫೊಟೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರೆಸ್ ಇನ್- ಫಾರ್ಮೇಶನ್ ಬ್ಯುರೋ (ಪಿಐಬಿ) ಬಿಡುಗಡೆ ಮಾಡಿರುವ ಮೋದಿ ವೈಮಾನಿಕ ಸಮೀಕ್ಷೆ ನಡೆಸುತ್ತಿರುವ ಫೋಟೊ ಟೀಕೆಗೆ ಗುರಿಯಾಗಿದ್ದು, ಫೋಟೊ ಶಾಪ್ ನಲ್ಲಿ ಎಡಿಟ್ ಮಾಡಿ ಬಿಡುಗಡೆಗೊಳಿಸಿದೆ.
ಜಲಾವೃತಗೊಂಡಿರುವ ಪ್ರದೇಶಗಳನ್ನು ಪ್ರಧಾನಿ ವಿಮಾನದ ಕಿಟಕಿ ಮೂಲಕ ವೀಕ್ಷಿಸುತ್ತಿರುವ ಚಿತ್ರ ಇದಾಗಿದ್ದು, ಮೂಲ ಫೋಟೋದಲ್ಲಿ ಕಿಟಕಿ ಮಸುಕಾಗಿ ಕಾಣುತ್ತಿದೆ. ಬಳಿಕ ಇದನ್ನು ಫೋಟೋಶಾಪ್‌ನಲ್ಲಿ ತಿದ್ದಿ ಹೊರಗಿನ ದೃಶ್ಯ ಕಾಣುವಂತೆ ಮಾಡಲಾಗಿದೆ. ಇದರಿಂದ ನೈಜತೆಗೆ ಧಕ್ಕೆ ಯಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ನಂತರ ಫೋಟೊವನ್ನು ತೆಗೆದುಹಾಕಿರುವ ಪಿಐಬಿ ತಪ್ಪನ್ನು ಸರಿಪಡಿಸಿಕೊಂಡಿದೆ. ಪಿಐಬಿಯ ಈ ಎಡವಟ್ಟು ಟ್ವಿಟರ್ ನಲ್ಲಿ ಕೆಲ ಕಾಲ ಟ್ರೆಂಡಿಂಗ್ ನಲ್ಲಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com