ಜಲಪ್ರಳಯ ಲೆಕ್ಕಿಸದೆ ಗ್ರಾಹಕರಿಗೆ ಹಾಲು ತಲುಪಿಸಿದ ರಾಧಾ, ವೈರಲ್ ಆಯ್ತು ಫೋಟೋ

ನರು ಮನೆಯಿಂದ ಹೊರಗೆ ಕಾಲಿಡಲು ಹಿಂಜರಿಯುತ್ತಿರುವಾಗ ರೈನ್ ಕೋಟ್ ತೊಟ್ಟು ಮಳೆ ನೀರನ್ನು ಲೆಕ್ಕಿಸದೆ ರಾಧಾ ತನ್ನ ಗ್ರಾಹಕರಿಗೆ ಹಾಲು...
ರಾಧಾ
ರಾಧಾ
ಚೆನ್ನೈ: ಚೆನ್ನೈನಲ್ಲಿ ಸುರಿದ ಭಾರೀ ಮಳೆಯಿಂದ ಎಲ್ಲ ಪ್ರದೇಶಗಳು ನೀರಿನಿಂದಾ
ವೃತವಾಗಿತ್ತು. ಡಿಸೆಂಬರ್ 1ರ ರಾತ್ರಿ ಚೆನ್ನೈನಲ್ಲಿ 30 ಸೆಂ.ಮೀ ಮಳೆ ಸುರಿದಿದ್ದು, ಡಿ. 2ರಂದು ಬೆಳಗ್ಗೆದ್ದಾಗ ನಗರಕ್ಕೆ ನಗರವೇ ನೀರಲ್ಲಿ ಮುಳುಗುತ್ತಿತ್ತು. 
ಡಿಸೆಂಬರ್ 2 ರಂದು ಬೆಳಗ್ಗೆ 4 ಗಂಟೆಗೆ ಎದ್ದ ರಾಧಾ, ತನ್ನ ನಿತ್ಯ ಕಾಯಕವಾದ ಹಾಲು ಮಾರಾಟವನ್ನು ಮುಂದುವರಿಸಿದ್ದಳು. ಬೆಳಗ್ಗೆ  5 ಗಂಟೆದೆ ಆವಿನ್ ಹಾಲು ಮಾರಾಟ ಕೇಂದ್ರಕ್ಕೆ ತಲುಪಿ ಹಾಲು ಖರೀದಿಸಿ, 6 ಗಂಟೆಯ ಹೊತ್ತಲ್ಲಿ ಶ್ರೀವಿದ್ಯಾ ಅಪಾರ್ಟ್‌ಮೆಂಟ್‌ಗೆ ತಲುಪಿ ಗ್ರಾಹಕರಿಗೆ ಹಾಲು ಪೂರೈಸಿದ್ದಳು.
ಜನರು ಮನೆಯಿಂದ ಹೊರಗೆ ಕಾಲಿಡಲು ಹಿಂಜರಿಯುತ್ತಿರುವಾಗ ರೈನ್ ಕೋಟ್ ತೊಟ್ಟು ಮಳೆ ನೀರನ್ನು ಲೆಕ್ಕಿಸದೆ ರಾಧಾ ತನ್ನ ಗ್ರಾಹಕರಿಗೆ ಹಾಲು ವಿತರಿಸುತ್ತಿದ್ದಳು. ಹಾಲಿನ ಪ್ಯಾಕೆಟ್ ತುಂಬಿದ ಬಕೆಟ್ ಹಿಡಿದುಕೊಂಡು ಮೊಳಕಾಲಿನಷ್ಟು ನೀರಿರುವ ರಸ್ತೆಯಲ್ಲಿ ರಾಧಾ ಹೋಗುತ್ತಿರುವ ದೃಶ್ಯವನ್ನು ಪದ್ಮ ರಮಣಿ ಎಂಬವರು ಸೆರೆ ಹಿಡಿದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು.
25 ವರ್ಷದಿಂದ ಚೆನ್ನೈ ನಗರವಾಸಿಗಳಿಗೆ ಹಾಲು ಪೂರೈಸುತ್ತಿರುವ ರಾಧಾ ಮಳೆಯಲ್ಲಿಯೂ ತನ್ನ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹಾಕಿದ ಟ್ವೀಟ್ 3000ಕ್ಕಿಂತಲೂ ಹೆಚ್ಚು ಬಾರಿ ಟ್ವೀಟ್ ಆಯ್ತು. ಹೀಗೆ ಹಾಲು ಮಾರುವ ರಾಧಾಳ ಫೋಟೋ ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿತು.
1976ರಲ್ಲಿ ರಾಜಮಾಣಿಕಂ ಎಂಬಾತನನ್ನು ಮದುವೆಯಾದ ರಾಧಾ ಚೆನ್ನೈನ ಅಶೋಕ್ ನಗರದಲ್ಲಿ ವಾಸಿಸುತ್ತಿದ್ದಾಳೆ. ಈಕೆ ಮದುವೆಯಾದ ವರ್ಷ ನವೆಂಬರ್ ತಿಂಗಳಲ್ಲಿ 450 ಮಿಮಿ ನಷ್ಟು ಮಳೆ ಬಂದಿತ್ತು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.
ತಮಿಳುನಾಡು ರಾಜ್ಯ ಹಾಲು ಸಹಕಾರ ಸಂಸ್ಥೆ ಆವಿನ್ ನ  ಸರ್ಟಿಫೈಡ್ ಮಾರಾಟಗಾರ್ತಿಯಾಗಿರುವ ರಾಧಾ 32 ವರುಷಗಳಿಂದ ಈ ಕಾಯಕ ಮಾಡುತ್ತಿದ್ದಾಳೆ. ಇಲ್ಲಿವರೆಗೆ ಹಾಲು ಮಾರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದ ರಾಧಾ, ಇದೀಗ ಆ ಒಂದು ಫೋಟೋದಿಂದ ಇಡೀ ಜಗತ್ತಿಗೆ ಪರಿಚಯವಾಗಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com