ಕಾಡು ಹಂದಿಗೆ ಡಿಕ್ಕಿ ಹೊಡೆದ ಸ್ಪೈಸ್ ಜೆಟ್

ಸ್ಪೈಸ್ ಜೆಟ್ ವಿಮಾನ ಶುಕ್ರವಾರ ಭೂ ಸ್ಪರ್ಷ ಮಾಡುವಾಗ ಕಾಡು ಹಂದಿಯೊಂದಕ್ಕೆ ಡಿಕ್ಕಿ ಹೊಡೆದಿರುವ...
ಕಾಡು ಹಂದಿಗೆ ಡಿಕ್ಕಿ ಹೊಡೆದ ಸ್ಪೈಸ್ ಜೆಟ್ ವಿಮಾನ
ಕಾಡು ಹಂದಿಗೆ ಡಿಕ್ಕಿ ಹೊಡೆದ ಸ್ಪೈಸ್ ಜೆಟ್ ವಿಮಾನ
ಭೋಪಾಲ್: ಸ್ಪೈಸ್ ಜೆಟ್ ವಿಮಾನ ಶುಕ್ರವಾರ ಭೂ ಸ್ಪರ್ಷ ಮಾಡುವಾಗ ಕಾಡು ಹಂದಿಯೊಂದಕ್ಕೆ ಡಿಕ್ಕಿ ಹೊಡೆದಿರುವ ಘಟನೆ ವರದಿಯಾಗಿದೆ.
ವಿಮಾನ ಸಿಬ್ಬಂದಿ ಸೇರಿ ಒಟ್ಟು 53 ಪ್ರಯಾಣಿಕರನ್ನು ಹೊಂದಿದ್ದ ಸ್ಪೈಸ್ ಜೆಟ್ ಎಸ್ ಜಿ 2458 ವಿಮಾನ ಭೂ ಸ್ಪರ್ಷ ಮಾಡುವಾಗ ಕಾಡು ಹಂದಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ, ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಸಂಜೆ ಸುಮಾರು 5.30ರ ವೇಳೆಗೆ ಮುಂಬೈ ವಿಮಾನ ನಿಲ್ದಾಣದಿಂದ ಹೊರಟ ಸ್ಪೈಸ್ ಜೆಟ್ ಜಬಲ್ಪುರ್ ವಿಮಾನ ನಿಲ್ದಾಣದಲ್ಲಿ ರಾತ್ರಿ 7.25ರ ವೇಳೆಗೆ ಭೂಸ್ಪರ್ಷ ಮಾಡುವ ಸಂದರ್ಭದಲ್ಲಿ ಕಾಡು ಹಂದಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com