ಐಎಸ್ಐ ಪರ ಗೂಢಚಾರ: ದೆಹಲಿ ಪೊಲೀಸರಿಂದ ಯೋಧ ಫರೀದ್ ಖಾನ್ ಬಂಧನ

ಪಾಕಿಸ್ತಾನದ ಗುಪ್ತಚರ ಸಂಸ್ಥೆ(ಐಎಸ್ಐ) ಪರ ಗೂಢಚರ್ಯೆ ನಡೆಸುತ್ತಿದ್ದ ಮತ್ತೊಬ್ಬನನ್ನು ಡಾರ್ಜಲಿಂಗ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ...
ಬಂಧನ
ಬಂಧನ

ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ(ಐಎಸ್ಐ) ಪರ ಗೂಢಚರ್ಯೆ ನಡೆಸುತ್ತಿದ್ದ ಮತ್ತೊಬ್ಬನನ್ನು ಡಾರ್ಜಲಿಂಗ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಐಎಸ್ಐ ಗೂಢಚಾರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ದೆಹಲಿ ಪೊಲೀಸರು ಈವರೆಗೂ ಒಟ್ಟು 5 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತ ಫರೀದ್ ಖಾನ್ ಸೇನಾ ಪಡೆಯ ಯೋಧ ಎಂದು ಗುರುತಿಸಲಾಗಿದೆ. ಫರೀದ್ ಸೇನೆಯಲ್ಲಿ ಹವಾಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಸೇನೆಗೆ ಸೇರಿದ ಹಲವು ಗುಪ್ತ ವಿಷಯಗಳನ್ನು ಐಎಸ್ಐಗೆ ರವಾನಿಸಿರುವ ಆರೋಪ ಇತನ ಮೇಲಿದೆ.

ದೆಹಲಿ ಪೊಲೀಸರು ಕಫಾಯಿತುಲ್ಲಾ ಖಾನ್ ನೇತೃತ್ವದಲ್ಲಿ ನಡೆಯುತ್ತಿದ್ದ ಗೂಢಚಾರಿಕೆಯನ್ನು ಭೇದಿಸುತ್ತಿದ್ದು, ಅವನೊಂದಿಗೆ ಕೆಲಸ ಮಾಡುತ್ತಿದ್ದವರನ್ನು ಬಂಧಿಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫರೀದ್ ಖಾನ್ ಸೇರಿದಂತೆ ಒಟ್ಟು 5 ಜನರನ್ನು ಬಂಧಿಸಲಾಗಿದೆ. ಪೊಲೀಸರು ನವೆಂಬರ್ 26ರಂದು ಕಫಾಯಿತುಲ್ಲಾ ಖಾನ್​ನನ್ನು ಬಂಧಿಸಿದ್ದರು.

ನಂತರ ಬಿಎಸ್ಎಫ್ ಯೋಧ ಅಬ್ದುಲ್ ರಷೀದ್, ಮಾಜಿ ಯೋಧ ಹವಾಲ್ದಾರ್ ಮುನಾವರ್ ಅಹಮದ್ ಮೀರ್ ಮತ್ತು ಸರ್ಕಾರಿ ಶಾಲಾ ಶಿಕ್ಷಕ ಸಬರ್ ಎಂಬುವವನ್ನು ಬಂಧಿಸಿದ್ದರು. ಭಾನುವಾರ ಬಂಧಿಸಿರುವ ಫರೀದ್ ಖಾನ್ ಸಬರ್ ಮತ್ತು ಇತರ ಆರೋಪಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com