ಇಸ್ರೋದಿಂದ ಡಿ. 16 ರಂದು ಸಿಂಗಾಪುರದ 6 ಉಪಗ್ರಹ ಉಡಾವಣೆ

ಜುಲೈ 10 ರಂದು ಬ್ರಿಟನ್ ಸರ್ರೆ ಉಪಗ್ರಹ ತಂತ್ರಜ್ಞಾನ ಲಿಮಿಟೆಡ್ ಅಭಿವೃದ್ಧಿ ಪಡಿಸಿದ್ದ 5 ಉಪಗ್ರಹಗಳನ್ನು ಉಡಾವಣೆ ಮಾಡಿದ್ದ ಇಸ್ರೋ ಇದೀಗ ಸಿಂಗಾಪುರದ...
ಇಸ್ರೋ
ಇಸ್ರೋ

ಚೆನ್ನೈ: ಜುಲೈ 10 ರಂದು ಬ್ರಿಟನ್ ಸರ್ರೆ ಉಪಗ್ರಹ ತಂತ್ರಜ್ಞಾನ ಲಿಮಿಟೆಡ್ ಅಭಿವೃದ್ಧಿ ಪಡಿಸಿದ್ದ 5 ಉಪಗ್ರಹಗಳನ್ನು ಉಡಾವಣೆ ಮಾಡಿದ್ದ ಇಸ್ರೋ ಇದೀಗ ಸಿಂಗಾಪುರದ 6 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ.

ಕಡಿಮೆ ಬೆಲೆಗೆ ಉಪಗ್ರಹ ಉಡಾವಣೆ ಮಾಡಬಲ್ಲ ಇಸ್ರೋದ ಸೇವೆ ಪಡೆಯಲು ವಿಶ್ವದ ಅನೇಕ ರಾಷ್ಟ್ರಗಳು ಮುಗಿ ಬೀಳುತ್ತಿವೆ. ಇದೀಗ, ಸಿಂಗಾಪುರ ದೇಶ ತನ್ನ ಉಪಗ್ರಹಗಳ ಉಡಾವಣೆಗೆ ಇಸ್ರೋದ ನೆರವು ಪಡೆಯುತ್ತಿದೆ. ಸಿಂಗಾಪುರದ 6 ಉಪಗ್ರಹಗಳನ್ನು ಪಿಎಸ್ಎಲ್'ವಿ ರಾಕೆಟ್ ಡಿಸೆಂಬರ್ 16 ರಂದು ಉಡಾವಣೆ ಮಾಡಲಿದೆ ಎಂದು ಇಸ್ರೋದ ಅಧಿಕಾರಿಗಳು ಹೇಳಿದ್ದಾರೆ.

625 ಕಿಲೋ ತೂಕದ ಸಿಂಗಾಪುರದ 6 ಉಪಗ್ರಹಗಳನ್ನು ಶ್ರೀಹರಿಕೋಟಾದಲ್ಲಿ ಸಂಜೆ 6 ಗಂಟೆಗೆ ಭಾರತದ ರಾಕೆಟ್ ಆಗಸದತ್ತ ಹೊತ್ತೊಯ್ಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com