ಉಸ್ಮಾನಿಯ ವಿವಿಯಲ್ಲಿ ಬೀಫ್ ಫೆಸ್ಟಿವಲ್: ಬಿಜೆಪಿ ಶಾಸಕನ ಬಂಧನ, ಪೊಲೀಸ್ ಸರ್ಪಗಾವಲು

ಹೈದರಾಬಾದ್ ನ ಉಸ್ಮಾನಿಯಾ ವಿಶ್ವ ವಿದ್ಯಾನಿಲಯದಲ್ಲಿ ಒಂದು ಬಣದ ವಿದ್ಯಾರ್ಥಿಗಳು ಏರ್ಪಡಿಸಿದ್ದ ಬೀಫ್ ಫೆಸ್ಟಿವಲ್ ಸಂಬಂಧ ಪೊಲೀಸರು ಬಿಜೆಪಿ ಶಾಸಕ ರಾಜಾಸಿಂಗ್ ಅವರನ್ನು ...
ಉಸ್ಮಾನಿಯಾ ವಿವಿ
ಉಸ್ಮಾನಿಯಾ ವಿವಿ

ಹೈದರಾಬಾದ್: ಹೈದರಾಬಾದ್ ನ ಉಸ್ಮಾನಿಯಾ ವಿಶ್ವ ವಿದ್ಯಾನಿಲಯದಲ್ಲಿ ಒಂದು ಬಣದ ವಿದ್ಯಾರ್ಥಿಗಳು ಏರ್ಪಡಿಸಿದ್ದ ಬೀಫ್ ಫೆಸ್ಟಿವಲ್ ಸಂಬಂಧ ಪೊಲೀಸರು ಬಿಜೆಪಿ ಶಾಸಕ ರಾಜಾಸಿಂಗ್ ಅವರನ್ನು ಬಂಧಿಸಿ, ಬೀಫ್ ಫೆಸ್ಟಿವಲ್ ಆಯೋಜಿಸಿದ್ದ ಹಲವು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಶಾಸಕ ರಾಜಾ ಸಿಂಗ್ ಕೋಮು ಗಲಭೆ ಉಂಟು ಮಾಡಬಹುದು ಎಂಬ ಮುನ್ನೆಚ್ಚರಿಕಾ ಕ್ರಮವಾಗಿ ರಾಜಾ ಸಿಂಗ್ ಅವರನ್ನು ಗೃಹ ಬಂಧನದಲ್ಲಿಡಲಾಗಿದೆ. ಕೆಲ ವಿದ್ಯಾರ್ಥಿಗಳಿ ಇಂದು ಆಯೋಜಿಸಿದ್ದ ಬೀಫ್ ಫೆಸ್ಟಿವಲ್ ಗೆ ವಿರುದ್ಧವಾಗಿ ಗೋ ಸೇವಾ ದಿವಸ್ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ರಾಜಾಸಿಂಗ್, ಪ್ರತಿಭಟನಾ ರ್ಯಾಲಿ ನಡೆಸಲು ಉದ್ದೇಶಿಸಿದ್ದರು.

ಬೀಫ್ ಫೆಸ್ಟಿವಲ್ ವಿರೋಧಿಸಿ ಮತ್ತೊಂದು ವಿದ್ಯಾರ್ಥಿಗಳ ಗುಂಪು ಪೋರ್ಕ್ ಫೆಸ್ಟಿವಲ್ ಆಯೋಜಿಸಿತ್ತು. ವಿವಿಯಲ್ಲಿ ಗೊಂದಲದ ವಾತಾವರಣ ಏರ್ಪಟ್ಟಿದ್ದು. ಪೊಲೀಸರ ಸರ್ಪಗಾವಲು ಹಾಕಲಾಗಿದೆ.

ಕ್ಯಾಂಪಸ್ ಒಳಗೆ ಈ ರೀತಿಯ ಯಾವುದೇ ಕಾರ್ಯಕ್ರಮವನ್ನು ಮಾಡಲು ಅನುಮತಿ ನೀಡುವುದಿಲ್ಲ ಎಂದು ವಿವಿ ಆಡಳಿತ ಮಂಡಳಿ ತಿಳಿಸಿದೆ. ಒಂದು ವೇಳೆ ಆಡಳಿತ ಮಂಡಳಿ ನಿಯಮವನ್ನು ಉಲ್ಲಂಘಿಸಿ ಭಾಗಿಯಾದರೇ ಅಂಥವರ ಅಡ್ಮಿಶನ್ ರದ್ದು ಪಡಿಸಲಾಗುವುದು ಎಂದು ವಿವಿ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com