
ನವದೆಹಲಿ: ದೇಶದ ವಿವಿಧ ಜೈಲುಗಳು ಹೊಂದಬಹುದಾದ ಕೈದಿಗಳ ಸಂಖ್ಯೆ 3,56,361 ಆಗಿದ್ದರೆ, ಸದ್ಯ ಅವು ಹೊಂದಿರುವ ಕೈದಿಗಳ ಸಂಖ್ಯೆ 4,18,536 ಎಂದು ರಾಜ್ಯಸಭೆಗೆ ತಿಳಿಸಲಾಯಿತು.
ಶಿವಸೇನೆ ಸಂಸದ ಅನಿಲ್ ದೇಸಾಯಿ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ಗೃಹ ರಾಜ್ಯ ಸಚಿವ ಹರಿಭಾಯ್ ಚೌಧರಿ, ದೆಹಲಿ ಜೈಲುಗಳಲ್ಲೇ 14,316 ಕೈದಿಗಳಿದ್ದಾರೆ. ಆದರೆ, ಅನುಮತಿತ ಸಾಮಥ್ರ್ಯ ಕೇವಲ 6,250 ಮಾತ್ರ ಎಂದಿದ್ದಾರೆ. ತಿಹಾರ್ ಜೈಲಿನಲ್ಲಿ ಇತ್ತೀಚೆಗೆ ನಡೆದ ಹಿಂಸಾತ್ಮಕ ಕೃತ್ಯಗಳ ಹಿನ್ನೆಲೆಯಲ್ಲಿ, ಜೈಲುಗಳಿರುವುದು ಕೈದಿಗಳನ್ನು ಸುಧಾರಿಸಲಿಕ್ಕೋ ಅಥವಾ ಹಾಳು ಮಾಡುವುದಕ್ಕೋ ಎಂಬ ಟೀಕೆಗಳ ಹಿನ್ನೆಲೆಯಲ್ಲಿ ಕೈದಿಗಳ ವ್ಯಕ್ತಿತ್ವ ಸುಧಾರಣೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
Advertisement