ದೆಹಲಿಗೆ ಆಗಮಿಸಿದ ಜಪಾನ್ ಪ್ರಧಾನಿ, ನಾಳೆ ವಾರಾಣಸಿಗೆ ಭೇಟಿ

ಜಪಾನ್ ಪ್ರಧಾನಿ ಶಿಂಝೊ ಅಬೆ ಅವರು ಶುಕ್ರವಾರ ಸಂಜೆ ರಾಷ್ಟ್ರ ರಾಜಧಾನಿ ದೆಹಲಿಗೆ ಆಗಮಿಸಿದ್ದು, ನಾಳೆ ಪ್ರಧಾನಿ ನರೇಂದ್ರ ಮೋದಿ ಜೊತೆಗೂಡಿ ವಾರಾಣಸಿಗೆ ಭೇಟಿ...
ಜಪಾನ್ ಪ್ರಧಾನಿ  ಶಿಂಝೊ ಅಬೆ
ಜಪಾನ್ ಪ್ರಧಾನಿ ಶಿಂಝೊ ಅಬೆ

ನವದೆಹಲಿ: ಜಪಾನ್ ಪ್ರಧಾನಿ ಶಿಂಝೊ ಅಬೆ ಅವರು ಶುಕ್ರವಾರ ಸಂಜೆ ರಾಷ್ಟ್ರ ರಾಜಧಾನಿ ದೆಹಲಿಗೆ ಆಗಮಿಸಿದ್ದು, ನಾಳೆ ಪ್ರಧಾನಿ ನರೇಂದ್ರ ಮೋದಿ ಜೊತೆಗೂಡಿ ವಾರಾಣಸಿಗೆ ಭೇಟಿ ನೀಡಲಿದ್ದಾರೆ.

ವಾರಾಣಸಿಯಲ್ಲಿ ದಶಾಶ್ವಮೇಧ ಘಾಟ್‌ನಲ್ಲಿ ನಡೆಯಲಿರುವ ‘ಗಂಗಾ ಆರತಿ’ ಕಾರ್ಯಕ್ರಮದಲ್ಲಿ ಭಾರತ-ಜಪಾನ್ ಪ್ರಧಾನಿಗಳಿಬ್ಬರೂ ಭಾಗವಹಿಸಲಿದ್ದಾರೆ.

ವಾರಾಣಸಿಯನ್ನು ಜಪಾನ್‌ನ ಸಾಂಸ್ಕೃತಿಕ ನಗರಿ ಕ್ಯೋಟೊ ಮಾದರಿಯಲ್ಲಿ ಸುಸಜ್ಜಿತ ನಗರವಾಗಿ (ಸ್ಮಾರ್ಟ್‌ ಸಿಟಿ) ಅಭಿವೃದ್ಧಿಪಡಿಸಲು ಭಾರತ ಜಪಾನ್‌ ಈಗಾಗಲೇ ಒಪ್ಪಂದ ಮಾಡಿಕೊಂಡಿವೆ. ಕ್ಯೋಟೊದಲ್ಲಿ 2 ಸಾವಿರಕ್ಕೂ ಹೆಚ್ಚು ಬೌದ್ಧ ದೇಗುಲಗಳಿವೆ. ಈ ನಗರ  ಜಪಾನ್‌ನ ಹಳೆಯ ರಾಜಧಾನಿ ಕೂಡ ಆಗಿತ್ತು. ಈ ಹಿನ್ನೆಲೆಯಲ್ಲಿ ಶಿಂಝೊ ಅಬೆ ವಾರಾಣಸಿ ಭೇಟಿ ಮಹತ್ವ ಪಡೆದುಕೊಂಡಿದೆ.

ಶಿಂಝೊ ಅಬೆ ಅವರ ಮೂರು ದಿನಗಳ ಭಾರತ ಪ್ರವಾಸ ಇಂದಿನಿಂದ ಆರಂಭವಾಗಿದ್ದು, ಈ ವೇಳೆ 98 ಸಾವಿರ ಕೋಟಿ ರುಪಾಯಿ ಮೊತ್ತದ ಬುಲೆಟ್ ರೈಲು ಒಪ್ಪಂದಕ್ಕೆ ಸಹಿ ಸೇರಿದಂತೆ ಹಲವು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ.

ಇನ್ನು ಜಪಾನ್ ಪ್ರಧಾನಿ ಭಾರತ ಪ್ರವಾಸದ ಬಗ್ಗೆ ಟ್ಟೀಟ್ ಮಾಡಿರುವ ಪ್ರಧಾನಿ ಮೋದಿ ಅವರು, ‘ಶಿಂಝೊ ಭಾರತದ ಆತ್ಮೀಯ ಸ್ನೇಹಿತ ಮತ್ತು ಅಪೂರ್ವ ನಾಯಕ’ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com