ರೈತ ಮುಖಂಡ ಶರದ್ ಜೋಶಿ ನಿಧನ

ಕೃಷಿ ಅರ್ಥಶಾಸ್ತ್ರ ಹಾಗು ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಮತ್ತು ಒಣಭೂಮಿ ಬೇಸಾಯ ಪದ್ಧತಿಯೇ ರೈತರಲ್ಲಿ ಬಡತನಕ್ಕೆ ಕಾರಣ...
ರೈತ ಮುಖಂಡ ಶರದ್ ಜೋಶಿ
ರೈತ ಮುಖಂಡ ಶರದ್ ಜೋಶಿ

ಪುಣೆ: ಕೃಷಿ ಅರ್ಥಶಾಸ್ತ್ರ ಹಾಗು ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಮತ್ತು ಒಣಭೂಮಿ ಬೇಸಾಯ ಪದ್ಧತಿಯೇ ರೈತರಲ್ಲಿ ಬಡತನಕ್ಕೆ ಕಾರಣ ಎಂದು ಪ್ರತಿಪಾದಿಸುತ್ತಿದ್ದ ರೈತ ಮುಖಂಡ, ಶೆಟ್ಕರಿ ಸಂಘಟನೆಯ ಸ್ಥಾಪಕ ಶರದ್ ಜೋಶಿ(81 ವ) ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ.

ಅವರು ಇಬ್ಬರು ಪುತ್ರಿಯರಾದ ಶ್ರೇಯಾ ಶಹನೆ ಮತ್ತು ಡಾ. ಗೌರಿ ಜೋಶಿ ಅವರನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಜೋಶಿ ಅವರು ಪ್ರತಿಪಾದಿಸಿದ ಭಾರತ್ / ಇಂಡಿಯಾ ಸಿದ್ದಾಂತ ಬಹಳ ಪ್ರಸಿದ್ಧವಾದದ್ದು. ನಮ್ಮ ದೇಶದ ಶೋಷಿತ ವರ್ಗ, ಕೃಷಿಕ ಬಹುತೇಕ ವರ್ಗದವರು ಮತ್ತು ವಿಶೇಷ ಅಲ್ಪಸಂಖ್ಯಾತರ ಮಧ್ಯೆ ಆರ್ಥಿಕ ಮತ್ತು ಸಾಂಸ್ಕೃತಿಕ ಭಿನ್ನತೆ ಮತ್ತು ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮತ್ತು ಕೃಷಿ ಸಾಲ ಸೌಲಭ್ಯ ಜನರಿಗೆ ದೊರಕುವಂತಾಗಬೇಕು ಎಂದು ಪ್ರತಿಪಾದಿಸಿದವರು.

ಸ್ವಿಜರ್ಲೆಂಡಿನಲ್ಲಿ ಯೂನಿವರ್ಸಲ್ ಪೋಸ್ಟಲ್ ಯೂನಿಯನ್ ನಲ್ಲಿ ವೃತ್ತಿಯಲ್ಲಿದ್ದ ಜೋಶಿಯವರು ಅದನ್ನು ಬಿಟ್ಟು ಭಾರತಕ್ಕೆ ಬಂದು ರೈತಪರ ಹೋರಾಟಗಳಲ್ಲಿ, ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com