10,000 ಆಟೋಗೆ ಪರವಾನಗಿ ನೀಡಲು ದೆಹಲಿ ಸರ್ಕಾರ ನಿರ್ಧಾರ

ಸಮ-ಬೆಸ ಸಂಖ್ಯೆ ಕಾರುಗಳ ಚಾಲನೆ ನಿಯಮವನ್ನು ಜಾರಿಗೊಳಿಸುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಆಗುವ ತೊಂದರೆಯನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಸಮ-ಬೆಸ ಸಂಖ್ಯೆ ಕಾರುಗಳ ಚಾಲನೆ ನಿಯಮವನ್ನು ಜಾರಿಗೊಳಿಸುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಆಗುವ ತೊಂದರೆಯನ್ನು ತಪ್ಪಿಸಲು ದೆಹಲಿ ಸರ್ಕಾರ ಈ ತಿಂಗಳಾಂತ್ಯದೊಳಗೆ ಹತ್ತು ಸಾವಿರ ಹೊಸ ಆಟೋ ರಿಕ್ಷಾಗಳಿಗೆ ಪರವಾನಗಿ ನೀಡಲು ನಿರ್ಧರಿಸಿದೆ. 
ಇದರ ಜೊತೆಗೆ ಆರು ಸಾವಿರ ಬಸ್‍ಗಳನ್ನು ಸಾರ್ವಜನಿಕ ಸೇವೆಗೆ ಬಿಡಲಾಗುವುದು. ಜನವರಿ 1ರಿಂದ ಸಮ-ಬೆಸ ಸಂಖ್ಯೆ ಕಾರು ನಿಯಮ ಜಾರಿಗೆ ಬರಲಿದ್ದು ಹದಿನೈದು ದಿನ ಪ್ರಾಯೋಗಿಕವಾಗಿ ನಡೆಸಲಾಗುವುದು. 
ದೆಹಲಿಯಲ್ಲಿ ಸದ್ಯ 80 ಸಾವಿರ ಆಟೋಗಳಿವೆ. ಹೊಸ ಆಟೋಗಳಿಗೆ ಪರವಾನಗಿ ನೀಡುವ ಪ್ರಕ್ರಿಯೆಯನ್ನು ದೆಹಲಿ ಸರ್ಕಾರ ವೇಗಗೊಳಿಸಿದ್ದು ಸಾರ್ವಜನಿಕರಿಗೆ ಆಗಬಹುದಾದ ಎಲ್ಲ ಸಮಸ್ಯೆಗಳನ್ನು ನಿವಾರಿಸುವತ್ತ ನೋಟ ಹರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com