
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ಭೇಟಿ ನೀಡಿದ ಕೆಲವೇ ದಿನಗಳಲ್ಲಿ ಉಗ್ರ ಹಫೀಜ್ ಸಯೀದ್ ಮುಂಬೈ ದಾಳಿಯ ಬಗ್ಗೆ ಹೇಳಿಕೆ ನೀಡಿದ್ದು, 26 /11 ರ ಮುಂಬೈ ಉಗ್ರರ ದಾಳಿಯಲ್ಲಿ ನನ್ನ ಪಾತ್ರವಿರುವುದನ್ನು ಸಾಬೀತುಪಡಿಸಲು ಭಾರತಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾನೆ.
ಉಗ್ರ ಹಫೀಜ್ ಸಯೀದ್ ನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಅಪ್ ಡೇಟ್ ಆಗಿದ್ದು, ಮುಂಬೈ ದಾಳಿ ಪ್ರಕರಣದ ಬಗ್ಗೆ ಪಾಕಿಸ್ತಾನ ಸರ್ಕಾರ ಮೌನ ವಹಿಸಿತ್ತು. ಆದರೆ ನಾನು ಸುಷ್ಮಾ ಸ್ವರಾಜ್ ಅವರಿಗೆ ಪ್ರತಿಕ್ರಿಯಿಸುತ್ತಿದ್ದೇನೆ, ದಾಳಿ ನಡೆದು ಏಳು ವರ್ಷಗಳೇ ಕಳೆದಿವೆ, ಈ ವರೆಗೂ ಮುಂಬೈ ದಾಳಿ ರುವಾರಿಯನ್ನು ಕಂಡುಹಿಡಿಯಲು ಭಾರತಕ್ಕೆ ಸಾಧ್ಯವಾಗಿಲ್ಲ. ಅಲ್ಲಾ ಮನಸ್ಸು ಮಾಡಿದರೆ ಮುಂಬೈ ದಾಳಿ ರುವಾರಿಯನ್ನು ಕಂಡುಹಿಡಿಯಲು ಭಾರತಕ್ಕೆ ಕೊನೆಯವರೆಗೂ ಸಾಧ್ಯವಾಗುವುದಿಲ್ಲ ಎಂದು ಉಗ್ರ ಹಫೀಜ್ ಸಯೀದ್ ತಿಳಿಸಿದ್ದಾನೆ.
ಮುಂಬೈ ದಾಳಿ ಕುರಿತು ಸರಿಯಾದ ಸಾಕ್ಷ್ಯ ಒದಗಿಸಲು ಭಾರತ ವಿಫಲವಾಗಿದೆ. ಮುಂಬೈ ದಾಳಿ ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸುವುದಾಗಿ ಇತ್ತೀಚೆಗಷ್ಟೇ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸುಷ್ಮಾ ಸ್ವರಾಜ್ ಅವರಿಗೆ ಪಾಕ್ ಭರವಸೆ ನೀಡಿತ್ತು.
Advertisement