ಹೇಮಾ ಉಪಾಧ್ಯಾಯ್
ಹೇಮಾ ಉಪಾಧ್ಯಾಯ್

ಕಲಾವಿದೆ ಹೇಮಾ, ವಕೀಲ ಹರೀಶ್ ಕೊಲೆ: ವಾರಣಾಸಿಯಲ್ಲಿ ಶಂಕಿತ ಆರೋಪಿ ಬಂಧನ

ಚಿತ್ರ ಕಲಾವಿದೆ ಹೇಮಾ ಉಪಾದ್ಯಾಯ ಹಾಗೂ ವಕೀಲ ಹರೀಶ್ ಭಂಬಾನಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಾಧು ರಾಜ್ ಬಹಾರ್ ನನ್ನು ಉತ್ತರಪ್ರದೇಶದ...
ಮುಂಬೈ: ಚಿತ್ರ ಕಲಾವಿದೆ ಹೇಮಾ ಉಪಾದ್ಯಾಯ ಹಾಗೂ ವಕೀಲ ಹರೀಶ್ ಭಂಬಾನಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಾಧು ರಾಜ್ ಬಹಾರ್ ನನ್ನು ಉತ್ತರಪ್ರದೇಶದ ವಾರಣಾಸಿಯಲ್ಲಿ ವಿಶೇಷ ಕಾರ್ಯಪಡೆ ಪೊಲೀಸರು ಬಂಧಿಸಿದ್ದಾರೆ. 
ಸಾಧು ರಾಜ್ ಬಹಾರ್ ಕಲಾವಿದನಾಗಿದ್ದು ಹೇಮಾ ಅವರ ಮಾಜಿ ಪತಿ ಚೈತನ್ ಉಪಾಧ್ಯಾಯ್ ವಿರುದ್ಧ ಬಲವಾದ ಸಾಕ್ಷ್ಯ ನೀಡುವುದಾಗಿ ಶುಕ್ರವಾರ ಹೇಮಾಗೆ ಕರೆ ಮಾಡಿದ್ದ ಎಂದು ತಿಳಿದುಬಂದಿದ್ದು, ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 
ಶನಿವಾರ ರಾತ್ರಿ ಕಾಂದೀವಿಲಿ ನಗರದ ಮೋರಿಯಲ್ಲಿ ಎರಡು ಬಾಕ್ಸ್ ಗಳು ಪತ್ತೆಯಾಗಿದ್ದು, 43 ವರ್ಷದ ಹೇಮಾ ಉಪಾಧ್ಯಾಯ್ ಹಾಗೂ 65 ವರ್ಷದ ಹರೀಶ್ ಭಂಬಾನಿ ಅವರ ಮೃತದೇಹಗಳು ಪತ್ತೆಯಾಗಿತ್ತು. 

Advertisement

X
Kannada Prabha
www.kannadaprabha.com