ಗಣರಾಜ್ಯೋತ್ಸವ ಪರೇಡ್ ಗೆ ಟ್ಯಾಬ್ಲೋ ಕಳುಹಿಸದಿರಲು ತೆಲಂಗಾಣ ನಿರ್ಧಾರ

2016 ರ ಗಣರಾಜ್ಯೋತ್ಸವ ಪರೇಡ್ ಗೆ ಟ್ಯಾಬ್ಲೋ ಕಳುಹಿಸದಿರಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: 2016 ರ ಗಣರಾಜ್ಯೋತ್ಸವ ಪರೇಡ್ ಗೆ ಟ್ಯಾಬ್ಲೋ ಕಳುಹಿಸದಿರಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಎರಡು ಬಾರಿ ಕಳುಹಿಸಿದ್ದ ಟ್ಯಾಬ್ಲೋವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ ವಾಪಸ್ ಕಳುಹಿಸಿದ್ದರಿಂದ ತೆಲಂಗಾಣ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ತೆಲಂಗಾಣ ಸಂಸ್ಕೃತಿ ಪರಂಪರೆ ಪ್ರತಿಬಿಂಬಿಸುವ ಮೂರು ಟ್ಯಾಬ್ಲೋ ಮಾದರಿಗಳನ್ನು ತೆಲಂಗಾಣ ಸರ್ಕಾರ ಕಳುಹಿಸಿತ್ತು. ಆದರೆ ರಕ್ಷಣಾ ಸಚಿವಾಲಯ ಇವುಗಳನ್ನು ತಿರಸ್ಕರಿಸಿ ಹಿಂದಕ್ಕೆ ಕಳುಹಿಸಿದೆ.

ಟ್ಯಾಬ್ಲೋ ಮಾದರಿಗಳನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಕಳುಹಿಸಿದ್ದರಿಂದ ನಿರಾಶೆಗೊಂಡಿರುವ ತೆಲಂಗಾಣ ಸರ್ಕಾರ ಭವಿಷ್ಯದಲ್ಲೂ ಯಾವುದೇ ಟ್ಯಾಬ್ಲೋ ಕಳುಹಿಸದಿರಲು ನಿರ್ಧಾರ ಮಾಡಿದೆ ಎಂದು ಟಿಆರ್ ಎಸ್ ಸಮಿತಿ ನಾಯಕ ಜಿತೇಂದ್ರ ರೆಡ್ಡಿ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಕಳೆದ ಬಾರಿ ಅಂದರೆ 2015ರ ಗಣರಾಜ್ಯೋತ್ಸವ ಪರೇಡ್ ಗೂ ತೆಲಂಗಾಣ ಸರ್ಕಾರ ಟ್ಯಾಬ್ಲೋ ಕಳುಹಿಸಿತ್ತು, ಆ ವೇಳೆಯೂ ಕೂಡ ಆಯ್ಕೆ ಸಮಿತಿ ತೆಲಂಗಾಣ ಸರ್ಕಾರದ ಟ್ಯಾಬ್ಲೋ ವನ್ನು ಆಯ್ಕೆ ಮಾಡದೇ ವಾಪಸ್ ಕಳುಹಿಸಿತ್ತು. ಈ ಬಾರಿಯೂ ತಿರಸ್ಕಾರಗೊಂಡಿರುವುದರಿಂದ ಅಸಮಾಧಾನ ಗೊಂಡಿರುವ ತೆಲಂಗಾಣ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com