ಕೋಸ್ಟ್ ಗಾರ್ಡ್ ಡಿಐಜಿ ಲೋಶಾಲಿ ವಜಾ

ಕಳೆದ ವರ್ಷ ಪಾಕಿಸ್ತಾನದ ಮೀನುಗಾರಿಕಾ ಹಡಗು ಸ್ಫೋಟಕ್ಕೆ ಸಂಬಂಧಿಸಿ ಸರ್ಕಾರದ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ...
ಬಿ ಕೆ ಲೋಶಾಲಿ
ಬಿ ಕೆ ಲೋಶಾಲಿ
ನವದೆಹಲಿ: ಕಳೆದ ವರ್ಷ ಪಾಕಿಸ್ತಾನದ ಮೀನುಗಾರಿಕಾ ಹಡಗು ಸ್ಫೋಟಕ್ಕೆ ಸಂಬಂಧಿಸಿ ಸರ್ಕಾರದ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದ ಕೋಸ್ಟ್ ಗಾರ್ಡ್ ಡಿಐಜಿ ಬಿ ಕೆ ಲೋಶಾಲಿ ಅವರನ್ನು ವಜಾ ಮಾಡಲಾಗಿದೆ. 
ಡಿಐಜಿ ರ್ಯಾಂಕ್‍ನ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ಮೂರು ತಿಂಗಳ ಕಾಲ ಲೋಶಾಲಿ ಮೇಲಿದ್ದ ಆರೋಪದ ಬಗ್ಗೆ ತನಿಖೆ ನಡೆಸಿತ್ತು. ಅವರ ಮೇಲಿನ ಆರೋಪಗಳೆಲ್ಲ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಿರುವುದಾಗಿ ಹಿರಿಯ ಅಧಿಕಾರಿ ತಿಳಿಸಿದ್ದಾರೆ. 
ಕಳೆದ ವರ್ಷದ ಡಿ.31ರಂದು ಸ್ಫೋಟಕಗಳನ್ನು ಹೊತ್ತೊಯ್ಯುತ್ತಿದ್ದ ಪಾಕಿಸ್ತಾನದ ಹಡಗು ಗುಜರಾತ್ ಕರಾವಳಿಯಾಚೆ ಸ್ಫೋಟಗೊಂಡಿತ್ತು. ``ಈ ಹಡಗಿನಲ್ಲಿ ಶಂಕಿತ ಉಗ್ರರಿದ್ದರು. ನಮ್ಮ ಗೃಹ ರಕ್ಷಕ ಪಡೆಯ ಯೋಧರು ಆ ಹಡಗನ್ನು ಹಿಂಬಾಲಿಸಿದ ಕಾರಣ ಹಡಗಿನಲ್ಲಿದ್ದವರು ಆತ್ಮಾಹುತಿ ಮಾಡಿಕೊಂಡರು'' ಎಂದು ರಕ್ಷಣಾ ಸಚಿವ ಪರ್ರಿಕರ್ ಹೇಳಿದ್ದರು. 
ಆದರೆ, ಕೋಸ್ಟ್ ಗಾರ್ಡ್ ಡಿಐಜಿ ಲೋಶಾಲಿ ಅವರು, ``ಅವರಿಗೆ ಬಿರಿಯಾನಿ ಕೊಡಲು ನಾವು ಬಯಸುವುದಿಲ್ಲ. ಹಾಗಾಗಿ, ನಾನೇ ಆ ಹಡಗನ್ನು ಸ್ಫೋಟಿಸುವಂತೆ ಆದೇಶಿಸಿದ್ದೆ.'' ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com