• Tag results for boat

ಪ್ರತಿದಿನ ದೋಣಿಯಲ್ಲಿ ಪ್ರಯಾಣ, ಅಪಾಯದಲ್ಲಿಯೇ ಜೀವನ ಸಾಗಿಸುವ ಪಾಡು ಈ ದ್ವೀಪವಾಸಿಗಳದ್ದು!

ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಕುಗ್ರಾಮಗಳಿಗೆ ಸಂಪರ್ಕಿಸಲು ವಿವಿಧ ರೀತಿಯ ಸಾರಿಗೆ ಸಂಪರ್ಕ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ವಿದ್ಯುತ್ ಮತ್ತು ಇತರ ಸೌಲಭ್ಯ ವ್ಯವಸ್ಥೆಗಳಿವೆ. ಆದರೆ ಇದೊಂದು ದ್ವೀಪಸಮೂಹದ ಕುಗ್ರಾಮವಾಗಿದ್ದು, ಇಲ್ಲಿನ ನಾಗರಿಕರು ಇನ್ನೂ ದೋಣಿಗಳನ್ನು ಆಶ್ರಯಿಸಿಕೊಂಡಿದ್ದಾರೆ.

published on : 2nd June 2022

ಕಪ್ಪು ಸಮುದ್ರದಲ್ಲಿ ರಷ್ಯಾದ ಶಸ್ತ್ರ ಸಜ್ಜಿತ ಗಸ್ತು ದೋಣಿಗಳನ್ನು ಹೊಡೆದುರುಳಿಸಿದ ಉಕ್ರೇನ್

ರಷ್ಯಾ - ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದ್ದು, ಕಪ್ಪು ಸಮುದ್ರದ ಸ್ನೇಕ್ ಐಲ್ಯಾಂಡ್ ಬಳಿ ನಮ್ಮ ಡ್ರೋನ್‌ಗಳು ರಷ್ಯಾದ ಎರಡು ಶಸ್ತ್ರ ಸಜ್ಜಿತ ಗಸ್ತು ದೋಣಿಗಳನ್ನು ಹೊಡೆದುರುಳಿಸಿದೆ ಎಂದು ಕೀವ್ ಸೋಮವಾರ ಹೇಳಿದೆ.

published on : 2nd May 2022

ಗಣೇಶಗುಡಿಯಲ್ಲಿ ಕೆಲವೇ ಅಂತರದಲ್ಲಿ ತಪ್ಪಿದ ದುರಂತ: ಮುಳುಗುತ್ತಿದ್ದ ದೋಣಿ ರಕ್ಷಿಸಿದ ತೂರ್ ಆಪರೇಟರ್ ಗಳು!

ದಾಂಡೇಲಿ ಸಮೀಪದ ಗಣೇಶಗುಡಿಯಲ್ಲಿ ದೋಣಿ ಮುಳುಗಿ ಕೆಲವೇ ಅಂತರದಲ್ಲಿ ಸಂಭವಿಸಬೇಕಿದ್ದ ದುರಂತವೊಂದನ್ನು ಪ್ರವಾಸಿ ನಿರ್ವಾಹಕರು ತಪ್ಪಿಸಿದ್ದಾರೆ. ಈ ಘಟನೆಯು ಸ್ಥಳದಲ್ಲಿ ನಡೆಯುತ್ತಿದ್ದ ನಿಯಮ ಉಲ್ಲಂಘನೆಗಳು ಬಹಿರಂಗಗೊಳ್ಳುವಂತೆ ಮಾಡಿದೆ.

published on : 15th April 2022

ಜಾರ್ಖಂಡ್ ನಲ್ಲಿ ಪ್ರಯಾಣಿಕ ದೋಣಿ ದುರಂತ: ಕನಿಷ್ಠ 16 ಮಂದಿ ನಾಪತ್ತೆ, 5 ಮಂದಿ ರಕ್ಷಣೆ

ಜಾರ್ಖಂಡ್ ನಲ್ಲಿ ಪ್ರಯಾಣಿಕ ದೋಣಿ ಮುಳುಗಿ ದುರಂತ ಸಂಭವಿಸಿದ್ದು, ಕನಿಷ್ಠ 16 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

published on : 25th February 2022

ಗುಜರಾತ್: ಪಾಕಿಸ್ತಾನದ ಏಳು ಮೀನುಗಾರಿಕಾ ದೋಣಿಗಳು ಬಿಎಸ್ಎಫ್ ವಶ

ಗಡಿ ಭದ್ರತಾ ಪಡೆ ಗುರುವಾರ ಗುಜರಾತ್‌ನ ಭುಜ್‌ನ ಕ್ರೀಕ್ ಪ್ರದೇಶದ ಹರಾಮಿ ನಲ್ಲಾದ ಸಾಮಾನ್ಯ ಪ್ರದೇಶದಲ್ಲಿ ಏಳು ಪಾಕಿಸ್ತಾನಿ ಮೀನುಗಾರಿಕೆ ದೋಣಿಗಳನ್ನು ವಶಪಡಿಸಿಕೊಂಡಿದೆ. ಈ ದೋಣಿಗಳನ್ನು ಮಧ್ಯಾಹ್ನ 12 ಗಂಟೆಗೆ ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್‌ಎಫ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

published on : 17th February 2022

ಮಧ್ಯ ಪ್ರದೇಶ: ನದಿಯಲ್ಲಿ ಮಗುಚಿ ಬಿದ್ದ ದೋಣಿ, ಇಬ್ಬರು ನಾಪತ್ತೆ- ವಿಡಿಯೋ 

ಮಧ್ಯ ಪ್ರದೇಶದ ಸಿಂಧ್ ನದಿಯಲ್ಲಿ ದೋಣಿಯೊಂದು ಮಗುಚಿ ಬಿದಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. 10 ಜನರು ಈ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

published on : 29th January 2022

ಭೀಕರ ವಿಡಿಯೋ: ಜಾಲಿ ಮೂಡ್ ನಲ್ಲಿ ಬೋಟಿಂಗ್ ಮಾಡುತ್ತಿದ್ದ ಬೋಟ್ ಗಳ ಮೇಲೆ ಬಿದ್ದ ಬೃಹತ್ ಬಂಡೆ, 7 ಸಾವು, 20 ಮಂದಿ ನಾಪತ್ತೆ

ಜಾಲಿ ಮೂಡ್ ನಲ್ಲಿ ಬೋಟಿಂಗ್ ಮಾಡುತ್ತಿದ್ದ ಬೋಟ್ ಗಳ ಮೇಲೆ ದೈತ್ಯಾಕಾರದ ಬೃಹತ್ ಬಂಡೆಯೊಂದು ಉರುಳಿದ್ದು, 2 ಬೋಟ್ ಗಳಲ್ಲಿದ್ದ ಕನಿಷ್ಛ 7 ಮಂದಿ ಸಾವನ್ನಪ್ಪಿದ್ದು, 32 ಮಂದಿ ಗಾಯಗೊಂಡಿದ್ದಾರೆ.

published on : 9th January 2022

ರಿಂಗ್ ನೆಟ್ ಬಳಕೆಗೆ ವಿರೋಧ; ಮೀನುಗಾರರ ನಡುವೆ ಪರಸ್ಪರ ವಾಗ್ವಾದ; ಸಮುದ್ರ ಮಧ್ಯದಲ್ಲಿ ಬೋಟ್ ಗೆ ಬೆಂಕಿ!

ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ರಿಂಗ್ ನೆಟ್ ಗಳ ಬಳಕೆಯನ್ನು ವಿರೋಧಿಸಿದ ವಿಷಯವಾಗಿ ಮೀನುಗಾರರ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು, ಬೋಟ್ ಗೆ ಸಮುದ್ರದ ಮಧ್ಯೆ ಬೆಂಕಿ ಹಚ್ಚಿರುವ ಘಟನೆ ವಿಶಾಖಪಟ್ಟಣಂ ನಲ್ಲಿ ನಡೆದಿದೆ. 

published on : 4th January 2022

ಬಾಂಗ್ಲಾದೇಶ: ನದಿಯಲ್ಲಿ ದೋಣಿ ಬೆಂಕಿಗಾಹುತಿ; 36 ಮಂದಿ ಸಾವು

ದಕ್ಷಿಣ ಬಾಂಗ್ಲಾದೇಶದಲ್ಲಿ ಸರಕು ಮತ್ತು ಪ್ರಯಾಣಿಕರನ್ನು ಸಾಗಿಸುತ್ತಿದ್ದ ದೋಣಿ ಬೆಂಕಿಗಾಹುತಿಯಾಗಿದ್ದು ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

published on : 24th December 2021

ಪಾಕ್ ನಿಂದ ನೀಚ ಕೃತ್ಯ: ಭಾರತೀಯ ದೋಣಿ ಮೇಲೆ ಪಾಕ್ ನೌಕಾಪಡೆಯಿಂದ ಫೈರಿಂಗ್; ಮೀನುಗಾರ ಸಾವು

ಪಾಕಿಸ್ತಾನಿ ನೌಕಾಪಡೆ ಮತ್ತೊಂದು ನೀಚ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಭಾರತಕ್ಕೆ ಸೇರಿದ್ದ ದೋಣಿಯ ಮೇಲೆ ಗುಂಡಿನ ದಾಳಿ ನಡೆಸಿದೆ. ಪಾಕ್ ನೌಕಾ ಸೇನೆಯಿಂದ ನಡೆದ ಈ ಫೈರಿಂಗ್ ನಲ್ಲಿ ಓರ್ವ ಮೀನುಗಾರ ಸಾವಿಗೀಡಾಗಿದ್ದು, ಮತ್ತೋರ್ವ ಗಾಯಗೊಂಡಿದ್ದಾರೆ.

published on : 7th November 2021

ಒಡಿಶಾ: ಆನೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ದೋಣಿ ಮಗುಚಿಬಿದ್ದು, ಟಿವಿ ವರದಿಗಾರ ದುರ್ಮರಣ

ಆನೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ಒಡಿಆರ್ ಎಎಫ್ ಪವರ್ ದೋಣಿ ಮಹಾದಾಯಿ ನದಿಯಲ್ಲಿ ಮಗುಚಿ ಬಿದ್ದ ಪರಿಣಾಮ ಒಡಿಶಾದ ಖ್ಯಾತ ಟಿವಿ ಜರ್ನಲಿಸ್ಟ್  ಅರಿಂದಮ್ ದಾಸ್ ಶುಕ್ರವಾರ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

published on : 25th September 2021

ಗುಜರಾತ್: 250 ಕೋಟಿ ರೂ. ಮೌಲ್ಯದ ಡ್ರಗ್ಸ್ ನೊಂದಿಗೆ ಇರಾನಿಯನ್ ಬೋಟ್ ಎಟಿಎಸ್ ವಶಕ್ಕೆ

ಗುಜರಾತ್ ಕರಾವಳಿ ಗಾರ್ಡ್ ಮತ್ತು ರಾಜ್ಯ ಭಯೋತ್ಪಾದನಾ ನಿಗ್ರಹ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಗುಜರಾತ್ ಕರಾವಳಿಯ ಭಾರತೀಯ ಸಮುದ್ರದಲ್ಲಿ ಏಳು ಸಿಬ್ಬಂದಿ ಮತ್ತು ಭಾರೀ ಪ್ರಮಾಣದ ಹೆರಾಯಿನ್ ಹೊಂದಿದ್ದ ಇರಾನಿಯನ್  ದೋಣಿಯೊಂದನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

published on : 19th September 2021

ಬೈಂದೂರು: ಮೀನುಗಾರಿಕಾ ದೋಣಿ ಮಗುಚಿ ಇಬ್ಬರು ಮೀನುಗಾರರು ನಾಪತ್ತೆ

ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಮೀನುಗಾರಿಕಾ ದೋಣಿ ಮಗುಚಿ, ಇಬ್ಬರು ಮೀನುಗಾರರು ನಾಪತ್ತೆಯಾಗಿರುವ ಘಟನೆ ನಡೆದಿದೆ.

published on : 18th September 2021

ಮಹಾರಾಷ್ಟ್ರ ದೋಣಿ ದುರಂತ: 7 ಮಂದಿ ಮೃತದೇಹ ಪತ್ತೆ, ಸಾವಿನ ಸಂಖ್ಯೆ 10ಕ್ಕೆ ಏರಿಕೆ

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ವರದಾ ನದಿಯಲ್ಲಿ ಸಂಭವಿಸಿದ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಮೃತದೇಹಗಳು ಪತ್ತೆಯಾಗಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. 

published on : 16th September 2021

ಗುಜರಾತ್ ತೀರದಲ್ಲಿ 12 ಸಿಬ್ಬಂದಿಯಿದ್ದ ಪಾಕಿಸ್ತಾನದ ಬೋಟ್ ವಶಕ್ಕೆ ಪಡೆದ ಇಂಡಿಯಾ ಕೋಸ್ಟ್ ಗಾರ್ಡ್!

ಗುಜರಾತ್ ಕರಾವಳಿಯಲ್ಲಿ 12 ಸಿಬ್ಬಂದಿಯೊಂದಿಗೆ ಪಾಕಿಸ್ತಾನದ ಬೋಟ್ ಅನ್ನು ಭಾರತೀಯ ಕೋಸ್ಟ್ ಗಾರ್ಡ್(ಐಸಿಜಿ) ವಶಪಡಿಸಿಕೊಂಡಿದೆ.

published on : 15th September 2021
1 2 3 > 

ರಾಶಿ ಭವಿಷ್ಯ