
ಅಡೆನ್: ಯೆಮೆನ್ ಕರಾವಳಿಯಲ್ಲಿ ಘೋರ ದುರಂತವೊಂದ ಸಂಭವಿಸಿದ್ದು, ಸುಮಾರು 150 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ ಕನಿಷ್ಟ 54 ಮಂದಿ ವಲಸಿಗರು ನಾಪತ್ತೆಯಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೆಮೆನ್‌ನ ದಕ್ಷಿಣ ಅಬ್ಯಾನ್ ಪ್ರಾಂತ್ಯದ ಅಹ್ವರ್ ಜಿಲ್ಲೆಯ ಬಳಿ ದೋಣಿ ಮಗುಚಿ ಬಿದ್ದಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಹಡಗಿನಲ್ಲಿದ್ದ ಸುಮಾರು 150 ಜನರ ಪೈಕಿ 10 ಜನರನ್ನು ರಕ್ಷಿಸಲಾಗಿದೆ ಎಂದು ಪ್ರಾಂತೀಯ ಆರೋಗ್ಯ ಅಧಿಕಾರಿ ಅಬ್ದುಲ್ ಖಾದಿರ್ ಬಜಮೀಲ್ ಅವರು ಹೇಳಿದ್ದಾರೆ.
ಒಂಬತ್ತು ಇಥಿಯೋಪಿಯನ್ನರು ಮತ್ತು ಒಬ್ಬ ಯೆಮೆನ್ ಪ್ರಜೆಯನ್ನು ರಕ್ಷಿಸಲಾಗಿದೆ. ಆದರೆ, 12ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸವಾಗುತ್ತಿದೆ ಎಂದು ತಿಳಿಸಿದ್ದಾರೆ.
ಯೆಮೆನ್ ನಲ್ಲಿ ಆಫ್ರಿಕಾದಿಂದ ಬರುವ ಅನಿಯಮಿತ ವಲಸಿಗರು ಬರುತ್ತಿದ್ದು, ವಲಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಅಂತರರಾಷ್ಟ್ರೀಯ ವಲಸೆ ಸಂಸ್ಥೆ ತಿಳಿಸಿದೆ.
ಒಂದು ದಶಕಕ್ಕೂ ಹೆಚ್ಚು ಕಾಲದ ಅಂತರ್ಯುದ್ಧದ ಹೊರತಾಗಿಯೂ, ಪೂರ್ವ ಆಫ್ರಿಕಾ ಪ್ರದೇಶದಿಂದ ಕೆಲಸಕ್ಕಾಗಿ ಗಲ್ಫ್ ಅರಬ್ ದೇಶಗಳನ್ನು ತಲುಪಲು ಪ್ರಯತ್ನಿಸುತ್ತಿರುವ ವಲಸಿಗರಿಗೆ ಯೆಮೆನ್ ಒಂದು ಪ್ರಮುಖ ಮಾರ್ಗವಾಗಿದೆ.
ಕೆಂಪು ಸಮುದ್ರ ಅಥವಾ ಅಡೆನ್ ಕೊಲ್ಲಿಯಾದ್ಯಂತ ಅಪಾಯಕಾರಿ, ಕಿಕ್ಕಿರಿದ ದೋಣಿಗಳಲ್ಲಿ ವಲಸಿಗರನ್ನು ಕಳ್ಳಸಾಗಣೆದಾರರು ಕರೆದೊಯ್ಯುತ್ತಾರೆ. ಕಳೆದ ವರ್ಷ 60,000 ಕ್ಕೂ ಹೆಚ್ಚು ವಲಸಿಗರ ಯೆಮೆನ್‌ಗೆ ಆಗಮಿಸಿದ್ದಾರೆಂದು ಅಂತರರಾಷ್ಟ್ರೀಯ ವಲಸೆ ಸಂಸ್ಥೆ ತಿಳಿಸಿದೆ.
Advertisement