ತಿರುಪತಿ ಲಡ್ಡು ಕದ್ದು ಸಿಕ್ಕಿಬಿದ್ದ ಸೇವಕ ಅಮಾನತು

ವಿಶ್ವವಿಖ್ಯಾತಿಗೊಂಡಿರುವ ತಿರುಪತಿ ದೇವಾಲಯದಲ್ಲಿ 60 ಸಾವಿರಕ್ಕೂ ಹೆಚ್ಚು ಲಡ್ಡು ಕದ್ದು ಸಿಕ್ಕಿಬಿದ್ದಿರುವ ಸೇವಕನೊಬ್ಬನನ್ನು ಅಧಿಕಾರಿಗಳು ಅಮಾನತು ಮಾಡಿರುವ ಘಟನೆ ಬುಧವಾರ ನಡೆದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ತಿರುಪತಿ: ವಿಶ್ವವಿಖ್ಯಾತಿಗೊಂಡಿರುವ ತಿರುಪತಿ ದೇವಾಲಯದಲ್ಲಿ 60 ಸಾವಿರಕ್ಕೂ ಹೆಚ್ಚು ಲಡ್ಡು ಕದ್ದು ಸಿಕ್ಕಿಬಿದ್ದಿರುವ ಸೇವಕನೊಬ್ಬನನ್ನು ಅಧಿಕಾರಿಗಳು ಅಮಾನತು ಮಾಡಿರುವ ಘಟನೆ ಬುಧವಾರ ನಡೆದಿದೆ.

ಈ ಕುರಿತಂತೆ ಮಾತನಾಡಿರುವ ಟಿಟಿಡಿ ಅಧಿಕಾರಿಯೊಬ್ಬರು, ದೇವಾಲಯಕ್ಕೆ 1 ಲಕ್ಷದಿಂದ 20 ಲಕ್ಷದವರೆಗೆ ದಾನ ನೀಡುವ ಭಕ್ತಾದಿಗಳಿಗಾಗಿ ದೇವಾಲಯ ಪ್ರತೀವರ್ಷ ಇತಿಷ್ಟು ಲಡ್ಡುಗಳೆಂದು ನೀಡುತ್ತಿರುತ್ತದೆ. ಆದರೆ, ಈ ಲಡ್ಡುಗಳು 3 ತಿಂಗಳಿನಿಂದ ಭಕ್ತಾದಿಗಳಿಗೆ ತಲುಪುತ್ತಿಲ್ಲ ಎಂಬುದು ಗಮನಕ್ಕೆ ಬಂದಿತ್ತು. ಹೀಗಾಗಿ ಈ ಬಗ್ಗೆ ಹಲವು ಅನುಮಾನಗಳು ಬಂದಿದ್ದವು.

ಇದೀಗ ದೇವಾಲಯದ ಸೇವಕನೇ ಕಳ್ಳನೆಂಬುದಾಗಿ ತಿಳಿದುಬಂದಿದ್ದು, ಈ ವರೆಗೂ ಸುಮಾರು ರು.10 ಲಕ್ಷ ಮೌಲ್ಯದ 60 ಸಾವಿರ ಲಡ್ಡುಗಳು ಅಕ್ರಮವಾಗಿ ಮಾರಾಟವಾಗಿರುವ ಬಗ್ಗೆ ಮಾಹಿತಿಗಳು ತಿಳಿದುಬಂದಿದೆ. ಹೀಗಾಗಿ ಸೇವಕನನ್ನು 30 ತಿಂಗಳಕಾಲ ಕೆಲಸದಿಂದ ಅಮಾನತು ಮಾಡಲಾಗಿದ್ದು, ಆತನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com