
ನವದೆಹಲಿ: ರಾಜಧಾನಿ ಸೇರಿ ಉತ್ತರಭಾರತ ದಾದ್ಯಂತ ಮಂಗಳವಾರ ಚಳಿಗಾಳಿ ತೀವ್ರವಾಗಿದ್ದು, ರಾಜಸ್ಥಾನದ ಜೈಪುರದಲ್ಲಿ ಕೊರೆವ ಚಳಿ ಈ ಬಾರಿಯ ಮೊದಲ ಬಲಿ ತೆಗೆದುಕೊಂಡಿದ್ದು, ಭಿಕ್ಷುಕನೊಬ್ಬ ಸಾವನ್ನಪ್ಪಿದ್ದಾನೆ.
ದೆಹಲಿಯಲ್ಲಿ ಚಳಿಯಿಂದಾಗಿ ಮಂಜು ಕವಿದ ವಾತಾವರಣ ವಿದ್ದು, ವಿಮಾನ ಹಾಗೂ ರೈಲ್ವೆ ಇಲಾಖೆಗಳು ಮುನ್ನೆಚ್ಚರಿಕೆ ಕ್ರಮ ಅನುಸರಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿವೆ. ಹಿಮಾಲಯ ತಪ್ಪಲಿನ ಉತ್ತರಾಖಂಡ್, ಜಮ್ಮುಕಾಶ್ಮೀರ, ಹಿಮಾಚಲಪ್ರದೇಶದಲ್ಲೂ ಚಳಿ ತೀವ್ರತೆ ಹೆಚ್ಚಾಗಿದೆ. ದೆಹಲಿಯಲ್ಲಿ 8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, ಈ ಹಂಗಾಮಿನ ವಾಡಿಕೆಗಿಂತ ತಾಪಮಾನ ಒಂದಂಶ ಕುಸಿತ ಕಂಡಿದೆ. ಪಂಜಾಬ್, ಹರ್ಯಾಣದಲ್ಲೂ ತಾಪಮಾನ ಭಾರಿ ಪ್ರಮಾಣದಲ್ಲಿ ಕುಸಿದಿದೆ.
Advertisement