
ನವದೆಹಲಿ: 2004ರ ಲೋಕಸಭಾ ಐಐಚುನಾವಣೆಯ ಬಳಿಕ ಯುಪಿಎ ಸರ್ಕಾರದ ಪ್ರಧಾನಿಯಾಗಿ ಪ್ರಣಬ್ ಮುಖರ್ಜಿಯ ಬದಲಾಗಿ, ಮನಮೋಹನ್ ಸಿಂಗ್ ಅವರ ಆಯ್ಕೆ ಕಾಂಗ್ರೆಸ್ಸಿಗರಿಗೆ ಅಷ್ಟೇ ಅಲ್ಲ, ದೇಶದ ಜನತೆಗೂ ಅಚ್ಚರಿ ತಂದಿತ್ತು.
ಆದರೆ, ಒಂದು ವೇಳೆ ಪ್ರಣಬ್ ಅವರನ್ನೇ ಪ್ರಧಾನಿಯನ್ನಾಗಿ ಮಾಡಿದ್ದರೆ, ಬಹುಶಃ ಕಾಂಗ್ರೆಸ್ 2014ರ ಚುನಾವಣಾ ಆಘಾತದಿಂದ ಪಾರಾಗಬಹುದಿತ್ತು ಐಂದು ಯುಪಿಎ ಮಾಜಿ ಸಚಿವ ಸಲ್ಮಾನ್ ಖುರ್ಷೀದ್ ಅಭಿಪ್ರಾಯಪಟ್ಟಿದ್ದಾರೆ. ಯುಪಿಎ ಸರ್ಕಾರದ ಭಾಗವಾಗಿದ್ದ ತಮ್ಮದಷ್ಟೇ ಅಲ್ಲದೆ, ಹಲವು ನಾಯಕರ ಕಿರು ಆತ್ಮಕಥೆ ಎಂದೇ ಬಣ್ಣಿಸಿರುವ ತಮ್ಮ ಹೊಸ ಪುಸ್ತಕ `ದ ಅದರ್ ಸೈಡ್ ಆಫ್ ದಿ ಮೌಂಟೆನ್ 'ನಲ್ಲಿ ಖುರ್ಷೀದ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಎಲ್ಲ ಕೈಮೀರಿ ಹೋದಮೇಲೆ ಬುದ್ದಿ ಬರುವುದು ಸಹಜ ಬಿಡಿ ಎಂದೂ ಅವರು ವ್ಯಂಗ್ಯವಾಡಿದ್ದಾರೆ.
ಅದೇ ವೇಳೆ, ಮಾಜಿ ಪ್ರಧಾನಿ ನರಸಿಂಹರಾವ್ ಅವರ ಅವಧಿಯಲ್ಲಿ ಹಣಕಾಸು ಸಚಿವರಾಗಿ ದೇಶದ ಭವಿಷ್ಯವನ್ನೇ ಬದಲಾಯಿಸಿದ ವ್ಯಕ್ತಿ ಮನಮೋಹನ್ ಸಿಂಗ್ ಎಂಬುದನ್ನು ಯಾರೂ ಮರೆಯಲಾಗದು ಎಂದಿದ್ದಾರೆ, ಯುಪಿಎ2ರ ಸೋಲಿಗೆ 2ಜಿ, ಕಾಮನ್ವೆಲ್ತ್, ಕಲ್ಲಿದ್ದಲು ಹಗರಣಗಳು ಕಾರಣ ಎಂದಿರುವ ಅವರು, ಆದರೆ, ಆ ಹಗರಣದಲ್ಲಿ ಹೆಸರು ಕೇಳಿಬಂದಿರುವ ರಾಜಕಾರಣಿಗಳ ಅಥವಾ ಅಧಿಕಾರಿಗಳ ಆಸ್ತಿಪಾಸ್ತಿಯಲ್ಲಿ ಬಹು ಕೋಟಿ ಹಗರಣಗಳ ನೆರಳು ಕಾಣಿಸುತ್ತಿಲ್ಲ. ಅಂದರೆ, ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ ನಿರ್ಧಾರಗಳಲ್ಲಿ ತಪ್ಪಾಗಿದೆಯೇ ವಿನಃ, ಹಣದ ವಹಿವಾಟು ಅಥವಾ ಭ್ರಷ್ಟಾಚಾರ ನಡೆದಿಲ್ಲ ಎಂದೂ ಕೂಡ ವಿಶ್ಲೇಷಿಸಿದ್ದಾರೆ.
Advertisement