ಮೈಸೂರಲ್ಲಿ ಮ್ಯಾಗಿ ನ್ಯೂಡಲ್ಸ್ ಮರುಪರೀಕ್ಷೆ: ಸುಪ್ರೀಂ ಕೋರ್ಟ್
ನವದೆಹಲಿ: ವಿಷಕಾರಿ ಅಂಶ ಪತ್ತೆಯಾಗಿ ನಿಷೇಧಕ್ಕೆ ಒಳಗಾಗಿದ್ದ ನೆಸ್ಲೆ ಸಂಸ್ಥೆ ಮ್ಯಾಗಿ ನೂಡಲ್ಸ್ ಮೇಲಿನ ನಿಷೇಧ ತೆರವಿನ ಬಳಿಕ ನೂತನವಾಗಿ ಮಾರುಕಟ್ಟೆಗೆ ಬಂದಿರುವ ಮ್ಯಾಗಿ ನ್ಯೂಡಲ್ಸ್ ಅನ್ನು ಕರ್ನಾಟಕದ ಮೈಸೂರು ಲ್ಯಾಬೋರೇಟರಿಯಲ್ಲಿ ಮರುಪರೀಕ್ಷೆ ನಡೆಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಈ ಹಿಂದೆ ನೆಸ್ಲೆ ಸಂಸ್ಥೆಯ ಖ್ಯಾತ ತಿನಿಸು ಮ್ಯಾಗಿ ನ್ಯೂಡಲ್ಸ್ ನಲ್ಲಿ ಸೀಸ ಮತ್ತು ಗ್ಲುಟಮೇಟ್ ಅಂಶ ಹೆಚ್ಚಿದೆ ಎಂಬ ಆರೋಪದಡಿಯಲ್ಲಿ ದೇಶದ ವಿವಿಧ ರಾಜ್ಯ ಸರ್ಕಾರಗಳು ಅದಕ್ಕೆ ನಿಷೇಧ ಹೇರಿದ್ದವು. ಅಲ್ಲದೆ ಮ್ಯಾಗಿ ನ್ಯೂಡಲ್ಸ್ ನ 16 ಸ್ಯಾಂಪಲ್ಸ್ ಅನ್ನು ಪರೀಕ್ಷೆಗೊಳಪಡಿಸಬೇಕು ಎಂದು ಎನ್ ಸಿ ಡಿಆರ್ ಸಿ ಆದೇಶ ಹೊರಡಿಸಿತ್ತು. ಇದನ್ನು ನೆಸ್ಲೆ ಇಂಡಿಯಾ ಸಂಸ್ಥೆ ಪ್ರಶ್ನಿಸಿ ಕಾನೂನು ಸಮರಕ್ಕಿಳಿದಿತ್ತು. ಬಳಿಕ ಮ್ಯಾಗಿ ನ್ಯೂಡಲ್ಸ್ ಮೇಲಿನ ನಿಷೇಧ ತೆರವುಗೊಳಿಸಬೇಕೆಂದು ನೆಸ್ಲೆ ಕಂಪನಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆ ನಂತರ ಮ್ಯಾಗಿ ಮೇಲಿನ ನಿಷೇಧವನ್ನು ಕೋರ್ಟ್ ತೆರವುಗೊಳಿಸಿದ್ದು, ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆಯಾಗುವ ಮ್ಯಾಗಿ ನ್ಯೂಡಲ್ಸ್ ಅನ್ನು ಪರೀಕ್ಷೆಗೊಳಪಡಿಸಬೇಕು ಎಂದು ನೆಸ್ಲೆ ಇಂಡಿಯಾಕ್ಕೆ ಬಾಂಬೆ ಈ ಹಿಂದೆ ಹೈಕೋರ್ಟ್ ಆದೇಶ ನೀಡಿತ್ತು. ಇದೀಗ ಬಾಂಬೆ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್ ಮೈಸೂರಿನಲ್ಲಿರುವ ಲ್ಯಾಬೋರೇಟರಿಯಲ್ಲಿ ಮರುಪರೀಕ್ಷೆ ನಡೆಸುವಂತೆ ಸೂಚನೆ ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ