ಚೇತನ್ ಚೌಹಾಣ್
ಚೇತನ್ ಚೌಹಾಣ್

ಜೇಟ್ಲಿ ವಿರುದ್ಧ ಆಪ್ ಆರೋಪ ತಳ್ಳಿ ಹಾಕಿದ ಡಿಡಿಸಿಎ

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಆಮ್ ಆದ್ಮಿ ಪಕ್ಷದ ಮುಖಂಡರು ಮಾಡಿರುವ ಆರೋಪವನ್ನು ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ತಳ್ಳಿ ಹಾಕಿದ್ದಾರೆ...
ಮುಂಬೈ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಆಮ್ ಆದ್ಮಿ ಪಕ್ಷದ ಮುಖಂಡರು ಮಾಡಿರುವ ಆರೋಪವನ್ನು ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ತಳ್ಳಿ ಹಾಕಿದ್ದಾರೆ. 
ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ) ಪರ ಮಾತನಾಡಿರುವ ಚೇತನ್ ಚೌಹಣ್, ಆಪ್ ಮುಖಂಡರು ವಿನಾಃ ಕಾರಣ ಜೇಟ್ಲಿ ಅವರನ್ನು ಮಧ್ಯೆ ಎಳೆತರುತ್ತಿದ್ದಾರೆ. ಆಪ್ ಮುಖಂಡರು ಮಾಡಿರುವ 8 ಆರೋಪಗಳು ಸುಳ್ಳು. ಅವರ ಆರೋಪಗಳಲ್ಲಿ ಹುರುಳಿಲ್ಲ ಎಂದು ಹೇಳಿದ್ದಾರೆ. 
ಡಿಡಿಸಿಎ ವಿಶ್ವದರ್ಜೆಯ ಕ್ರೀಡಾಂಗಣವನ್ನು ನಿರ್ಮಿಸಿದೆ. ಸ್ಟೇಡಿಯಂ ನಿರ್ಮಾಣಕ್ಕೆ 114 ಕೋಟಿ ರು. ವೆಚ್ಚ ಮಾಡಲಾಗಿದೆ. ಪಿಚ್ ಹಾಗೂ ಹುಲ್ಲುಹಾಸಿಗೆ 57.24 ಕೋಟಿ ರುಪಾಯಿ. 
ಕ್ರೀಡಾಂಗಣದ ಕಟ್ಟಡಕ್ಕೆ 57 ಕೋಟಿ. 48 ಲಕ್ಷ ರುಪಾಯಿಯಲ್ಲಿ ಕ್ರೀಡಾಂಗಣಕ್ಕೆ ಎಸಿ ಅಳವಡಿಕೆ ಮಾಡಲಾಗಿದೆ ಎಂದು ಚೇತನ್ ಚೌಹಾಣ್ ಹೇಳಿದ್ದಾರೆ. 
ಡಿಡಿಸಿಎನಲ್ಲಿ ಹಣಕಾಸಿನ ವ್ಯವಹಾರ ನಡೆದಿಲ್ಲ. ಅಲ್ಲದೆ ಯಾವುದೇ ಕಾರ್ಯಗಳು ಪಾರದರ್ಶಕವಾಗಿ ನಡೆದಿದೆ. ಹೀಗಾಗಿ ಮುಚ್ಚಿಡುವ ಅವಕಾಶವಿಲ್ಲ ಎಂದಿರುವ ಅವರು ಆಪ್ ಮುಖಂಡರು ಮಾಡಿರುವ 8 ಆರೋಪಗಳಲ್ಲಿ ಹುರುಳಿಲ್ಲ ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com