ನ್ಯಾಯಾಧೀಶರ ನೇಮಕಕ್ಕೆ ವಿಧಿವಿಧಾನ ಪ್ರಸ್ತಾವನೆ ಕೊಡಿ

ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಕೊಲಿಜಿಯಂ ವ್ಯವಸ್ಥೆಯ ಸುಧಾರಣೆಯ ಹೊಣೆಯನ್ನು ಸಂಪೂರ್ಣ ಕೇಂದ್ರ ಸರ್ಕಾರಕ್ಕೆ...
ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಕೊಲಿಜಿಯಂ ವ್ಯವಸ್ಥೆಯ ಸುಧಾರಣೆಯ ಹೊಣೆ ಯನ್ನು ಸಂಪೂರ್ಣ ಕೇಂದ್ರ ಸರ್ಕಾರಕ್ಕೆ...
ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಕೊಲಿಜಿಯಂ ವ್ಯವಸ್ಥೆಯ ಸುಧಾರಣೆಯ ಹೊಣೆ ಯನ್ನು ಸಂಪೂರ್ಣ ಕೇಂದ್ರ ಸರ್ಕಾರಕ್ಕೆ...
ನವದೆಹಲಿ: ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಕೊಲಿಜಿಯಂ ವ್ಯವಸ್ಥೆಯ ಸುಧಾರಣೆಯ ಹೊಣೆಯನ್ನು ಸಂಪೂರ್ಣ ಕೇಂದ್ರ ಸರ್ಕಾರಕ್ಕೆ ಬಿಟ್ಟುಕೊಟ್ಟಿರುವ ಸುಪ್ರೀಂಕೋರ್ಟ್, ಸಿಜೆಐ ಜತೆ ಸಮಾಲೋಚನೆ ನಡೆಸಿ ಈ ಸಂಬಂಧದ ವಿಧಿ ವಿಧಾನ ಪ್ರಸ್ತಾವನೆ(ಎಂಒಪಿ) ಸಿದ್ಧಪಡಿಸುವಂತೆ ಸೂಚಿಸಿದೆ. 
ಅಲ್ಲದೆ. ಆ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳನ್ನೂ ಸೂಚಿಸಿದೆ. ಕೊಲಿಜಿಯಂ ವ್ಯವಸ್ಥೆ ಸುಧಾರಣೆ ಕುರಿತ ನ್ಯಾಯ ಮೂರ್ತಿ ಜೆ ಎಸ್ ಖೇಹರ್ ನೇತೃತ್ವದ ಸಂವಿಧಾನ ಪೀಠ ಬುಧವಾರ ತನ್ನ ಈ ಅಭಿಪ್ರಾಯ ತಿಳಿಸಿದೆ.
ಇದೇ ವೇಳೆ, ವಿಧಿವಿಧಾನ ಪ್ರಸ್ತಾವನೆ ಸಿದ್ಧಪಡಿಸುವುದು ಆಡಳಿತಾತ್ಮಕ ಹೊಣೆಯಾ ಗಿದ್ದು, ನ್ಯಾಯಾಂಗ ಅದರಿಂದ ಹೊರಗಿರಬೇಕು ಎಂಬ ಕೇಂದ್ರ ಸರ್ಕಾರದ ವಾದವನ್ನು ಸಂವಿಧಾನ ಪೀಠ ಒಪ್ಪಿಕೊಂಡಿದೆ. 
ಸಂವಿಧಾನ ಪೀಠ ಸೂಚಿಸಿದ ಪ್ರಮುಖ ಕ್ರಮಗಳು
 _ ಹೈಕೋರ್ಟ್ ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇಮಕಕ್ಕೆ ನಿರ್ದಿಷ್ಟ ವಯೋಮಿತಿ ನಿಗದಿ
_ ನೇಮಕದಲ್ಲಿ ಪಾರದರ್ಶಕತೆ ಮತ್ತು ಬದ್ಧತೆ ತರುವ ನಿಟ್ಟಿನಲ್ಲಿ ನೇಮಕ ನಿರ್ಧಾರವನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು
_ ನೇಮಕ ಕುರಿತ ಪ್ರತಿ ಹಂತದ ವಿವರವನ್ನು ಕಾನೂನು ಸಚಿವಾಲಯ ಹಾಗೂ ಸಂಬಂಧಿತ ನ್ಯಾಯಾಲಯಗಳ ವೆಬ್ ಸೈಟ್‍ನಲ್ಲಿ ಪ್ರಕಟಿಸಬೇಕು
_ ನ್ಯಾಯಾಧೀಶರ ನೇಮಕ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಹೈಕೋರ್ಟ್ ಸುಪ್ರೀಂ ನಲ್ಲಿ ಪ್ರತ್ಯೇಕ ಕಾರ್ಯಾಲಯ ರಚನೆ
_ ಕೊಲಿಜಿಯಂ ಎಂಒಪಿಯಲ್ಲಿ ದೂರು ನಿರ್ವಹಣಾ ವ್ಯವಸ್ಥೆ ಕೂಡ ಅಳವಡಿಸಬೇಕು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com