ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪಾಕ್ ಕ್ರಮ ಕೈಗೊಳ್ಳುತ್ತಿಲ್ಲ: ಅಮೆರಿಕ ಅಧಿಕಾರಿ

ಭಾರತ ಹಾಗೂ ಅಫ್ಘಾನಿಸ್ತಾನಕ್ಕೆ ಮುಳುವಾಗಿರುವ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳ ಬಗ್ಗೆ ಪಾಕ್ ಸರ್ಕಾರ ಆಸಕ್ತಿ ತೋರುತ್ತಿಲ್ಲ ಎಂದು ಅಮೆರಿಕ ಅಧಿಕಾರಿ ಸೆನೆಟ್ ಗೆ ತಿಳಿಸಿದ್ದಾರೆ.
ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್(ಸಾಂಕೇತಿಕ ಚಿತ್ರ)
ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್(ಸಾಂಕೇತಿಕ ಚಿತ್ರ)

ವಾಷಿಂಗ್ಟನ್: ಭಾರತ ಹಾಗೂ ಅಫ್ಘಾನಿಸ್ತಾನಕ್ಕೆ ಮುಳುವಾಗಿರುವ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳ ಬಗ್ಗೆ ಪಾಕ್ ಸರ್ಕಾರ ಆಸಕ್ತಿ ತೋರುತ್ತಿಲ್ಲ ಎಂದು ಅಮೆರಿಕ ಅಧಿಕಾರಿ ಸೆನೆಟ್ ಗೆ ತಿಳಿಸಿದ್ದಾರೆ.
ಆಂತರಿಕವಾಗಿ ಭಯೋತ್ಪಾದನೆ ನಡೆಸುತ್ತಿರುವ ತೆಹರಿಕ್-ಎ- ತಾಲಿಬಾನ್ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸುತ್ತಿದ್ದು, ಭಾರತ- ಅಫ್ಘಾನಿಸ್ತಾನಕ್ಕೆ ಮಾರಕವಾಗಿರುವ ತನ್ನ ನೆಲದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕ ಸಂಘಟನೆಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ ಎಂದು ಅಮೆರಿಕ ಅಧಿಕಾರಿ ರಿಚರ್ಡ್ ಜಿ. ಓಸ್ಲೋನ್ ಸೆನೆಟ್ ವಿದೇಶಾಂಗ ಸಂಬಂಧಗಳ ಸಮಿತಿಗೆ ಮಾಹಿತಿ ನೀಡಿದ್ದಾರೆ.
ಕಳೆದ ಮೂರು ವರ್ಷಗಳ ಕಾಲ ಪಾಕ್ ನಲ್ಲಿ ಅಮೆರಿಕ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿರುವ ಓಸ್ಲೋನ್, ಪಾಕಿಸ್ತಾನ ಭಯೋತ್ಪಾದಕರ ಪಾಲಿಗೆ ಸ್ವರ್ಗದಂತಾಗಿದೆ ಎಂದು ಹೇಳಿದ್ದಾರೆ.  ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಎಂಬ ವ್ಯತ್ಯಾಸವನ್ನು ತೋರದೇ ಇರಲು ಪಾಕಿಸ್ತಾನ ತಾತ್ವಿಕವಾಗಿ ಒಪ್ಪಿಕೊಂಡರೂ, ಭಯೋತ್ಪಾದನೆ ನಿರ್ಮೂಲನೆ ಅಷ್ಟು ಸುಲಭದ ಮಾತಲ್ಲ, ಪ್ರತಿ ಬಾರಿ ದ್ವಿಪಕ್ಷೀಯ ಮಾತುಕತೆ ನಡೆದಾಗಲೂ ಹಕ್ಕಾನಿ ನೆಟ್ವರ್ಕ್ ಮತ್ತು ತಾಲಿಬಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಅಮೆರಿಕ ಸಲಹೆ ನೀಡುತ್ತಿರುತ್ತದೆ, ಆದರೆ ಈ ವರೆಗೂ ಪಾಕ್ ಅಂತಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಓಸ್ಲೋನ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com