ಚೆನ್ನೈನಲ್ಲಿರುವ ಸಂತ್ರಸ್ತರಿಗೆ ಸಾಲ ಮತ್ತು ಆರ್ಥಿಕ ಸಹಾಯವನ್ನು ವಿತರಿಸಿದ ಜೇಟ್ಲಿ, ತಮುಳ್ನಾಡು ಪ್ರಕೃತಿ ವಿಕೋಪಕ್ಕೆ ತುತ್ತಾಗಿದೆ. ಕಳೆದ ಕೆಲವು ವಾರಗಳ ಹಿಂದೆ ಇಲ್ಲಿ ಯಾವ ರೀತಿ ಪ್ರಕೃತಿ ಮುನಿಸಿಕೊಂಡಿತ್ತು ಎಂಬುದನ್ನು ನಾವು ನೋಡಿದ್ದೇವೆ. ಈ ಜಲಪ್ರಳಯದಿಂದಾಗಿ ಮನುಷ್ಯನಿಗೆ ತುಂಬಲಾರದಂಥಾ ನಷ್ಟವುಂಟಾಗಿದೆ. ಇದೀಗ ನಾವು ತುರ್ತು ಸಂದರ್ಭಗಳಲ್ಲಿ ಸಂತ್ರಸ್ತರಿಗೆ ಸಾಂತ್ವನ, ರಕ್ಷಣೆ ಮತ್ತು ಅಗತ್ಯ ವಸ್ತುಗಳ ಪೂರೈಕೆಯನ್ನು ಮಾಡಬೇಕಾಗಿದೆ. ಆದಾಗ್ಯೂ, ಪ್ರಕೃತಿ ವಿಕೋಪಗಳನ್ನು ನಮ್ಮಿಂದ ತಡೆಯಲು ಸಾಧ್ಯಲಿಲ್ಲ, ಆದರೆ ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.