ಜೇಟ್ಲಿ ವಿರುದ್ಧ ಕೇಜ್ರಿವಾಲ್ ತಪ್ಪು ಆರೋಪಗಳನ್ನು ಮಾಡುತ್ತಿದ್ದಾರೆ: ಬಿಜೆಪಿ

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಭಾರತೀಯ ರಾಜಕೀಯದ ಪ್ರಮಾಣಿಕತೆಯ ಪ್ರತೀಕವಾಗಿದ್ದು, ಅವರ ವಿರುದ್ಧ ಅರವಿಂದ್ ಕೇಜ್ರಿವಾಲ್ ಅವರು ತಪ್ಪು ಆರೋಪಗಳನ್ನು ಮಾಡುತ್ತಿದ್ದಾರೆಂದು ಬಿಜೆಪಿ ಭಾನುವಾರ ಹೇಳಿದೆ...
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)

ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಭಾರತೀಯ ರಾಜಕೀಯದ ಪ್ರಮಾಣಿಕತೆಯ ಪ್ರತೀಕವಾಗಿದ್ದು, ಅವರ ವಿರುದ್ಧ ಅರವಿಂದ್ ಕೇಜ್ರಿವಾಲ್ ಅವರು ತಪ್ಪು ಆರೋಪಗಳನ್ನು ಮಾಡುತ್ತಿದ್ದಾರೆಂದು ಬಿಜೆಪಿ ಭಾನುವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರು ಬಿಜೆಪಿ ಪಕ್ಷದ ವಕ್ತಾರ ಶಹನ್ವಾಜ್ ಹುಸೇನ್ ಅವರು, ಅರವಿಂದ್ ಕೇಜ್ರಿವಾಲ್ ಅವರು ತಪ್ಪು ಸಂಖ್ಯೆಗೆ ಕರೆ ಮಾಡುತ್ತಿದ್ದಾರೆ. ಜೇಟ್ಲಿ ಅವರ ಪ್ರಾಮಾಣಿಕತೆಯ ಮೇಲೆ ಇಡೀ ದೇಶದ ಜನತೆಗೆ ನಂಬಿಕೆಯಿದೆ. ಜೇಟ್ಲಿ ಅವರು ಭಾರತೀಯ ರಾಜಕೀಯದ ಪ್ರಾಮಾಣಿಕತೆಯ ಸಂಕೇತವಾಗಿದ್ದಾರೆ. ಜೇಟ್ಲಿ ಅಧಿಕಾರದಲ್ಲಿದ್ದಾಗ ಡಿಡಿಸಿಎಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳಿದ್ದಾರೆ.

ಡಿಡಿಸಿಎಯಲ್ಲಿ ನಡೆದ ಅಕ್ರಮ ಅವ್ಯವಹಾರಗಳನ್ನು ಕಾಮನ್ ವೆಲ್ತ್ ಸ್ಕ್ಯಾಮ್ ಆಫ್ ಕ್ರಿಕೆಟ್ ಎಂದು ಕರೆದಿರುವ ಆಮ್ ಆದ್ಮಿ ಪಕ್ಷದ ನಾಯಕರು, ಅವರ ಜೇಟ್ಲಿ ಅವರು  1999ರಿಂದ 2013ರವರೆಗೆ ಡಿಡಿಸಿಎ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಖಾಸಗಿ ಕ್ಲಬ್ ನಂತೆ ಅದನ್ನು ನಡೆಸುತ್ತಿದ್ದರು ಎಂದು ಆರೋಪಿಸಿದ್ದರು. ಅಲ್ಲದೆ ಯುಪಿಎ ಅವಧಿಯಲ್ಲಿ ಹಗರಣಗಳು ಬೆಳಕಿಗೆ ಬಂದಾಗಲೆಲ್ಲಾ ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನೇ ಗುರಿಯಾಗಿಸಿಕೊಂಡು ಸಾಮೂಹಿಕ ಜವಾಬ್ದಾರಿಯ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದ ಬಿಜೆಪಿಯವರೇಕೆ ಈಗ ಜೇಟ್ಲಿ ವಿಚಾರದಲ್ಲಿ ಈ ತತ್ತ್ವ ಅನುಸರಿಸುತ್ತಿಲ್ಲ ಎಂದು ಆಪ್ ನಾಯಕರು ಪ್ರಶ್ನೆಯನ್ನು ಹಾಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com