
ಮುಂಬೈ: ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಮಾರ್ಕಾಂಡೇಯ ಕಾಟ್ಜು ಐಐಟಿ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದ್ದು ಐಐಟಿಯನ್ ಗಳಿಗೆ ಭಾರತದ ಬಗ್ಗೆ ನಿಜವಾದ ಅಭಿಮಾನ ಇಲ್ಲ ಎಂದು ಹೇಳಿದ್ದಾರೆ.
ಬಾಂಬೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಮಾರ್ಕಾಂಡೇಯ ಕಾಟ್ಜು ಐಐಟಿಯನ್ ಗಳಲ್ಲಿ ದೇಶಭಕ್ತಿ ಉಳಿದಿಲ್ಲ. ಐಐಟಿಯನ್ ಗಳು ಸ್ವಾರ್ಥಿಗಳಾಗಿದ್ದು ಅವರಲ್ಲಿ ದೇಶಭಕ್ತಿ ಉಳಿದಿಲ್ಲ ಎಂದು ಹೇಳಿದ್ದಾರೆ.
ಬಾಂಬೆ ಐಐಟಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಮಾರ್ಕಾಂಡೇಯ ಕಾಟ್ಜು ಅವರನ್ನು ಆಹ್ವಾನಿಸಲಾಗಿತ್ತು, ಆದರೆ ಕಾಟ್ಜು ಅವರು ಐಐಟಿ ವಿದ್ಯಾರ್ಥಿಗಳ ಬಗ್ಗೆ ಅನಿರೀಕ್ಷಿತ ಹೇಳಿಕೆ ನೀಡಿದ್ದಾರೆ. ವಿದ್ಯಾಭ್ಯಾಸದ ನಂತರ ಐಐಟಿಯನ್ ಗಳು ಹೊರದೇಶಗಳಿಗೆ ಹೋಗಿ ನೆಲೆಸಿ ಎನ್ ಆರ್ ಐ ಗಳಾಗುತ್ತಾರೆ. ಆದರೆ ದೇಶದ ಜನತೆಗೆ ಯಾವುದು ಒಳ್ಳೆಯದು ಯಾವುದು ಒಳ್ಳೆಯದಲ್ಲ ಎಂಬುದನ್ನು ಅರಿಯಲು ವಿಫಲರಾಗುತ್ತಾರೆ ಎಂದು ಮಾರ್ಕಾಂಡೇಯ ಕಾಟ್ಜು ಹೇಳಿದ್ದಾರೆ.
Advertisement