ಕೀರ್ತಿ ಅಜಾದ್ (ಸಂಗ್ರಹ ಚಿತ್ರ)
ಕೀರ್ತಿ ಅಜಾದ್ (ಸಂಗ್ರಹ ಚಿತ್ರ)

ಡಿಡಿಸಿಎ ಭ್ರಷ್ಟಾಚಾರ ಹೊರಹಾಕುವೆ: ಕೀರ್ತಿ ಅಜಾದ್

ಡಿಡಿಸಿಎ ಅತಿದೊಡ್ಡ ಭ್ರಷ್ಟಾಚಾರವನ್ನು ಭಾನುವಾರ ಬಯಲಿಗೆಳೆಯುವುದಾಗಿ ಬಿಜೆಪಿ ಸಂಸದ ಕೀರ್ತಿ ಆಜಾದ್ ಶನಿವಾರ ಘೋಷಿಸಿದ್ದಾರೆ...
Published on

ನವದೆಹಲಿ: ಡಿಡಿಸಿಎ ಅತಿದೊಡ್ಡ ಭ್ರಷ್ಟಾಚಾರವನ್ನು ಭಾನುವಾರ ಬಯಲಿಗೆಳೆಯುವುದಾಗಿ ಬಿಜೆಪಿ ಸಂಸದ ಕೀರ್ತಿ ಆಜಾದ್ ಶನಿವಾರ ಘೋಷಿಸಿದ್ದಾರೆ.

ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧದ ಆರೋಪಗಳ ಬಗ್ಗೆ ಸುಮ್ಮನಿರುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎರಡೆರಡು ಬಾರಿ ಮನವೊಲಿಸಿದರೂ ಆಜಾದ್ ಮಾತ್ರ ಬಗ್ಗಿಲ್ಲ. ``ಭಾನುವಾರ ಸಂಜೆ 4   ಗಂಟೆಗೆ ಆಡಿಯೋ-ವಿಶುವಲ್ ಜತೆಗೇ ಮಾಧ್ಯಮಗಳ ಮುಂದೆ ಬರುತ್ತೇನೆ. ಡಿಡಿಸಿಎ ಭ್ರಷ್ಟಾಚಾರವನ್ನು ಹೊರಹಾಕುತ್ತೇನೆ'' ಎಂದು ಕೀರ್ತಿ ಆಜಾದ್ ಶನಿವಾರ ಹೇಳಿದ್ದಾರೆ. ಜತೆಗೆ, ನನ್ನ ಹೋರಾಟ ಯಾರ   ವಿರುದ್ಧವೂ ಅಲ್ಲ, ಭ್ರಷ್ಟಾಚಾರದ ವಿರುದ್ಧ ಎಂದೂ ಅವರು ಘೋಷಿಸಿದ್ದಾರೆ. ಆಜಾದ್ 3 ಬಾರಿ ಬಿಜೆಪಿ ಸಂಸದರಾಗಿ ಆಯ್ಕೆಯಾದವರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com