
ನವದೆಹಲಿ: ವಿವಾದಿತ ಅಯೋಧ್ಯೆ ರಾಮ ದೇಗುಲ ವಿಚಾರ ಇದೀಗ ಮತ್ತೆ ರಾಜಕೀಯ ನಾಯಕರ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಅಭದ್ರತೆ ಕಾಡಿದಾಗ ಬಿಜೆಪಿ ನಾಯಕರು ರಾಮ ದೇಗುಲ ವಿಚಾರವನ್ನು ಪ್ರಸ್ತಾಪಿಸುತ್ತಾರೆಂದು ಕಾಂಗ್ರೆಸ್ ಸೋಮವಾರ ಹೇಳಿದೆ.
ರಾಮ ದೇಗುಲ ನಿರ್ಮಾಣಕ್ಕೆ ಶಂಕು ಪ್ರತಿಷ್ಟಾಪನೆಯಾಗಿದೆ. ಆದರೆ, ದೇವಾಲಯ ಇನ್ನು ನಿರ್ಮಾಣವಾಗಿಲ್ಲ. ಬಿಜೆಪಿಯವರ ವರ್ಚಸ್ಸು ಯಾವಾಗ ಕಡಿಮೆಯಾಗುತ್ತದೆ ಹಾಗೂ ಅವರಿಗೆ ಯಾವಾಗ ಅಭದ್ರತೆ ಕಾಡುತ್ತದೆಯೋ ಆಗ ಅವರು ದೇಗುಲ ವಿಚಾರವನ್ನು ಪ್ರಸ್ತಾಪಿಸುತ್ತಾರೆಂದು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಹೇಳಿದ್ದಾರೆ.
ರಾಮ ನಾಮವನ್ನು ಬಳಸಿ ವಿಹೆಚ್ ಪಿ, ಆರ್ಎಸ್ಎಸ್, ಹಿಂದೂ ಮಹಾಸಭಾ ಹಾಗೂ ಬಿಜೆಪಿಯವರು ಉತ್ತಮ ವ್ಯವಹಾರವನ್ನು ಮಾಡುತ್ತಿದ್ದಾರೆ. ರಾಮ ನಾಮವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ಬಿಜೆಪಿಯುವರು ತಮ್ಮ ವರ್ಚಸನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಮ ದೇಗುಲ ವಿಚಾರ ಕುರಿತಂತೆ ಕಾಂಗ್ರೆಸ್ ನ ಮತ್ತೊಬ್ಬ ನಾಯಕ ಪಿ.ಎಲ್.ಪುಣ್ಯಾ ಮಾತನಾಡಿದ್ದು, ಆರ್ ಎಸ್ ಎಸ್ ಸಂಘಟನೆಯು ರಾಮ ದೇಗುಲ ವಿಚಾರವನ್ನು ರಾಜಕೀಯ ಆಟಕ್ಕೆ ಬಳಸಿಕೊಳ್ಳುತ್ತಿದೆ. ಆದರೆ, ಇದರಿಂದ ಅವರಿಗೆ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ.
ಅಯೋಧ್ಯೆ ರಾಮದೇಗುಲ ವಿಚಾರ ಅತೀ ಮುಖ್ಯ ಹಾಗೂ ಸೂಕ್ಷ್ಮ ವಿಚಾರವೆಂದು ಆರ್ ಎಸ್ ಎಸ್ ಸಂಘಟನೆ ಹೇಳುತ್ತಿರುತ್ತದೆ. ದೇಗುಲ ಕಟ್ಟುವುದು ಪ್ರಮುಖ ವಿಚಾರ. ಆದರೆ ಯಾವಾಗ ಈ ವಿಚಾರ ನ್ಯಾಯಾಲಯ ಮೆಟ್ಟಿಲು ಹತ್ತುದೆಯೋ ಆಗ ಸಂಘಟನೆ ಹೇಳುತ್ತದೆ ನ್ಯಾಯಾಲಯ ಆದೇಶ ಬಂದ ನಂತರ ದೇವಾಲಯವನ್ನು ಕಟ್ಟಲಾಗುತ್ತದೆ ಎಂದು ಹೇಳುತ್ತಿರುತ್ತದೆ. ಆರ್ ಎಸ್ಎಸ್ ಸಂಘಟನೆಯನ್ನು ನಂಬಲು ಸಾಧ್ಯವಿಲ್ಲ. ರಾಮ ದೇಗುಲ ವಿಚಾರವನ್ನು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ರಾಜಕೀಯ ಲಾಭದಿಂದ ಆರ್ಎಸ್ಎಸ್ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Advertisement