
ನವದೆಹಲಿ: ಹೊಸ ಗ್ರಾಹಕರಿಗೆ ಬಿಎಸ್ಸೆನ್ನೆಲ್ ಹೊಸ ವರ್ಷಕ್ಕಾಗಿ ಭರ್ಜರಿ ಕೊಡುಗೆ ನೀಡಿದೆ. ಗ್ರಾಹಕರನ್ನು ಸೆಳೆಯುವ ಪ್ರಯತ್ನವಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆ ಮೊಬೈಲ್ ಕರೆ ದರಗಳನ್ನು ಶೇ.80ರಷ್ಟು ಕಡಿತಗೊಳಿಸಿದ್ದು, ಈ ಸೌಲಭ್ಯ ಹೊಸ ಗ್ರಾಹಕರಿಗೆ ಮೊದಲ 2 ತಿಂಗಳು ಮಾತ್ರ ಲಭ್ಯವಾಗಲಿದೆ.
ಬಿಎಸ್‍ಎನ್‍ಎಲ್ ಸಂಪರ್ಕ ಪಡೆಯಲು ಇಚ್ಛಿಸುವ ಹೊಸ ಗ್ರಾಹಕರು ಪರ್ ಸೆಕೆಂಡ್ ಪ್ಲ್ಯಾನ್‍ನಲ್ಲಿ ರು.36ರ ವೋಚರ್ ಹಾಗೂ ಪರ್ ಮಿನಿಟ್ ಪ್ಲ್ಯಾನ್‍ನಲ್ಲಿ ರು.37ರ ವೋಚರ್ ಅನ್ನು ಪಡೆಯಬೇಕು. ರು.37ರ ವೋಚರ್ ಪಡೆದವರಿಗೆ ಬಿಎಸ್ಸೆನ್ನೆಲ್ ಟು ಬಿಎಸ್ಸೆನ್ನೆಲ್‍ಗೆ ಸ್ಥಳೀಯ ಹಾಗೂ ಎಸ್‍ಟಿಡಿ ಕರೆ ದರ ನಿಮಿಷಕ್ಕೆ 10 ಪೈಸೆ ಮಾತ್ರ. ಇತರೆ ನೆಟ್‍ವರ್ಕ್‍ಗೆ ನಿಮಿಷಕ್ಕೆ 30 ಪೈಸೆ ಇರುತ್ತದೆ. ಅಂತೆಯೇ, ರು.36 ರೀಚಾರ್ಜ್ ಪಡೆದವ ರಿಗೆ ಬಿಎಸ್ಸೆನ್ನೆಲ್ ನೆಟ್‍ವರ್ಕ್‍ನಲ್ಲಿ ಸ್ಥಳೀಯ ಹಾಗೂ ಎಸ್‍ಟಿಡಿ ಕರೆಗಳಿಗೆ ಪ್ರತಿ 3 ಸೆಕೆಂಡಿಗೆ 1 ಪೈಸೆ ತಗುಲಿದರೆ, ಇತರೆ ನೆಟ್‍ವರ್ಕ್‍ಗೆ ಪ್ರತಿ 3 ಸೆಕೆಂಡಿಗೆ 2 ಪೈಸೆ ತಗಲುತ್ತದೆ ಎಂದು ಬಿಎಸ್ಸೆನ್ನೆಲ್ ಮುಖ್ಯಸ್ಥ ಅನುಪಮ್ ಶ್ರೀವಾಸ್ತವ ತಿಳಿಸಿದ್ದಾರೆ.
Advertisement