ನಿರ್ಭಯಾ ಪ್ರಕರಣ: ಬಾಲಾಪರಾಧಿ ಬಿಡುಗಡೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತ

ದೇಶದಾದ್ಯಂತ ಭಾರೀ ಸದ್ದು ಮಾಡಿದ್ದ ದೆಹಲಿ ನಿರ್ಭಯಾ ಪ್ರಕರಣ ಸಂಬಂಧ ಬಾಲಾಪರಾಧಿ ಬಿಡುಗಡೆ ಪ್ರಶ್ನಿಸಿ ದೆಹಲಿ ಮಹಿಳಾ ಆಯೋಗ...
ನಿರ್ಭಯಾ ಪ್ರಕರಣ: ಬಾಲಾಪರಾಧಿ ಬಿಡುಗಡೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತ
ನಿರ್ಭಯಾ ಪ್ರಕರಣ: ಬಾಲಾಪರಾಧಿ ಬಿಡುಗಡೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತ

ನವದೆಹಲಿ: ದೇಶದಾದ್ಯಂತ ಭಾರೀ ಸದ್ದು ಮಾಡಿದ್ದ ದೆಹಲಿ ನಿರ್ಭಯಾ ಪ್ರಕರಣ ಸಂಬಂಧ ಬಾಲಾಪರಾಧಿ ಬಿಡುಗಡೆ ಪ್ರಶ್ನಿಸಿ ದೆಹಲಿ ಮಹಿಳಾ ಆಯೋಗ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದೆ.

ನಿನ್ನೆಯಷ್ಟೇ ಬಾಲಾಪರಾಧಿಯನ್ನು ಬಿಡುಗಡೆ ಮಾಡದಂತೆ ಕೋರಿ ದೆಹಲಿ ಮಹಿಳಾ ಆಯೋಗ ಸುಪ್ರೀಂಕೋರ್ಟ್ ಗೆ ತುರ್ತು ಅರ್ಜಿ ಸಲ್ಲಿಸಿತ್ತು. ರಾತ್ರಿ 2ಗಂಟೆಗೆ  ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಬಿಡುಗಡೆಗೆ ತಡೆ ನೀಡಲು ನಿರಾಕರಿಸಿ, ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತ್ತು. ಇದೀಗ ವಿಚಾರಣೆ ನಡೆಸಿರುವ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದೆ.

ಅಲ್ಲದೆ, ನಮ್ಮ ದೇಶದಲ್ಲಿ ಸಮಾಜ ಸುಧಾರಣೆಗಾಗಿ ಶಿಕ್ಷೆ ನೀಡುವ ಪದ್ಧತಿ ಇದೆ. ಬಾಲಾಪರಾಧಿ ಈಗಾಗಲೇ 3 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಇನ್ನು ಎಷ್ಟು ದಿನವೆಂದು ಬಾಲಮಂದಿರದಲ್ಲಿ ಇಡಲಾಗುತ್ತದೆ. ಬಾಲಾಪರಾಧಿಗೆ ಹೆಚ್ಚು ಶಿಕ್ಷೆ ವಿಧಿಸಲು ಸಾಧ್ಯವೇ ಇಲ್ಲ. ಒಂದು ವೇಳೆ ಶಿಕ್ಷೆ ನೀಡಿದ್ದೇ ಆದರೆ ಇದು ಬಾಲಾಪರಾಧಿ ಹಕ್ಕಿಗೆ ಧಕ್ಕೆ ತಂದಂತೆ ಆಗುತ್ತದೆ ಹಾಗೂ ಅದು ಕಾನೂನಿಗೆ ವಿರುದ್ಧವಾಗುತ್ತದೆ. ಕಾನೂನಿಗೆ ವಿರುದ್ಧವಾಗಿ ನಡೆಯಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟ ಆದೇಶ ನೀಡಿದೆ.

ದೆಹಲಿ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ಈಗಾಗಲೇ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಬಾಲಾಪರಾಧಿ ನಿನ್ನೆಯಷ್ಟೇ ಬಿಡುಗಡೆಗೊಂಡಿದ್ದ. ಬಾಲಾಪರಾಧಿ ಬಿಡುಗಡೆ ವಿರೋಧಿಸಿ ಹಲವು ಪ್ರತಿಭಟನೆಗಳು ನಡೆದಿದ್ದವು. ಅತ್ಯಾಚಾರಕ್ಕೆ ಬಲಿಯಾದ ಯುವತಿ ಜ್ಯೋತಿಸಿಂಗ್ ಅಲಿಯಾಸ್ ನಿರ್ಭಯಾಳ ಪೋಷಕರು ಹಾಗೂ ಸಾವಿರಾರು ಮಂದಿ ಮಹಿಳಾ ಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದರು. ಈ ಎಲ್ಲಾ ವಿರೋಧದ ನಡುವೆಯೂ ನ್ಯಾಯಾಲಯ ನಿನ್ನೆ ಬಾಲಾಪರಾಧಿಗೆ ಬಂಧನದಂದ ಮುಕ್ತಿ ನೀಡಿತ್ತು. ಅಲ್ಲದೆ, ಆತನ ಜೀವಕ್ಕೆ ಅಪಾಯವಿದೆ ಎಂಬ ಹಿನ್ನೆಲೆಯಲ್ಲಿ ಹಾಗೂ ಭದ್ರತಾ ಕಾರಣಕ್ಕಾಗಿ ಎನ್ ಜಿಒ ವಶಕ್ಕೆ ಒಪ್ಪಿಸಿ, ರಹಸ್ಯ ಸ್ಥಳಕ್ಕೆ ಕಳುಹಿಸಲಾಗಿತ್ತು.

2012ರ ಡಿಸೆಂಬರ್ 16ರಂದು ದೆಹಲಿಯ ಬಸ್ ನಲ್ಲಿ ನಡೆದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಜ್ಯೋತಿ ಸಿಂಗ್ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.  ಅತ್ಯಾಚಾರ ಎಸಗಿ ಮಾರಣಾಂತಿಕ ಹಲ್ಲೆ ನಡೆಸಿ ಆಕೆಯ ಸಾವಿಗೂ ಕಾರಣರಾದ ಆರು ಮಂದಿ ಅಪರಾಧಿಗಳ ಪೈಕಿ ಅಂದು ಅಪ್ರಾಪ್ತನಾಗಿದ್ದ ಬಾಲಾಪರಾಧಿಗೆ ಇದೀಗ 20 ವರ್ಷ. ಇತರ ಐವರಲ್ಲಿ  ಒಬ್ಬ ತಿಹಾರ್ ಜೈಲಿನಲ್ಲಿ ಶವವಾಗಿ ಪತ್ತೆಯಾಗಿದ್ದ. ಉಳಿದ ನಾಲ್ವರು ಆರೋಪಿಗಳಿಗೆ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com