
ಮುಂಬೈ: ಈದ್ ಮಿಲಾದ್ ದಿನದ ಮುಂಜಾನೆ ವರೆಗೂ ಮದ್ಯದ ಅಂಗಡಿಗಳು ಕಾರ್ಯನಿರ್ವಹಿಸುವುದಕ್ಕೆ ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿದೆ. ಕ್ರಿಸ್-ಮಸ್ ಹಾಗೂ ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ತಡರಾತ್ರಿ ವರೆಗೂ ಮದ್ಯದ ಅಂಗಡಿಗಳು ಕಾರ್ಯನಿರ್ವಹಿಸಲು ಅನುಮತಿ ನೀಡಿರುವುದಕ್ಕೆ ಕಾಂಗ್ರೆಸ್ ಹಾಗು ಎಂಐಎಂ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಡಿ.24 ರಂದು(ಈದ್ ಮಿಲಾದ್) ಡಿ.25 (ಕ್ರಿಸ್ ಮಸ್) ಡಿ.31 ರಂದು ಮದ್ಯದ ಅಂಗಡಿಗಳು ಕಾರ್ಯನಿರ್ವಹಿಸುವ ಅವಧಿಗೆ ವಿನಾಯ್ತಿ ನೀಡಿ, ತಡ ರಾತ್ರಿ ಒಂದು ಗಂಟೆ ವರೆಗೂ ವರೆಗೂ ಕಾರ್ಯನಿರ್ವಹಿಸಲು ಅನುಮತಿ ನೀಡಿ ಮಹಾರಾಷ್ಟ್ರದ ಗೃಹ ಇಲಾಖೆ ಆದೇಶ ಹೊರಡಿಸಿದೆ.
ಸರ್ಕಾರದ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ಸಚಿನ್ ಸಾವಂತ್, ಮಹಾರಾಷ್ಟ್ರ ಸರ್ಕಾರ ಮುಸ್ಲಿಮರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ, ಆರ್ ಎಸ್ ಎಸ್ ನ ಸಿದ್ಧಾಂತಗಳನ್ನು ಪಾಲಿಸುತ್ತಿರುವ ಬಿಜೆಪಿ ಸರ್ಕಾರ ಮುಸ್ಲಿಮರನ್ನು ದೇಶದ ಎರಡನೇ ದರ್ಜೆಯ ನಾಗರಿಕರು ಎಂದು ಗುರಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರೆ. ಜೈನ ಸಮುದಾಯ 'ಪರ್ಯುಶಾನ್' ಎಂಬ ಉಪವಾಸ ಹಬ್ಬವನ್ನು ಆಚರಿಸುತ್ತಿದ್ದ ವೇಳೆ ಮಹಾರಾಷ್ಟ್ರ ಸರ್ಕಾರ ಮಾಂಸ ಮಾರಾಟವನ್ನು ನಿಷೇಧಿಸಿತ್ತು. ಆದರೆ ಮುಸ್ಲಿಮರ ಹಬ್ಬ ಈದ್-ಮಿಲಾದ್ ದಿನದಂದು ಮದ್ಯ ನಿಷೇಧಿಸಿಲ್ಲ ಎಂದು ಎಂಐಎಂ ಶಾಸಕ ಇಮ್ತಿಯಾಜ್ ಜಲೀಲ್ ಹೇಳಿದ್ದಾರೆ.
Advertisement